ಜಂಪ್ ರೋಫ್’ ಹಾಗೂ “ರೋಫ್ ಸ್ಕಿಪ್ಪಿಂಗ್” ಪಂದ್ಯಾಟ
ಬಂಟ್ವಾಳ: ಕ್ರೀಡೆಯಲ್ಲಿ ಜೀವನವನ್ನು ಕೂಡ ಕಟ್ಟಿಕೊಳ್ಳಬಹುದು, ಹಳ್ಳಿಯ ಮಕ್ಕಳಿಗೆ ಸರಿಯಾದ ತರಬೇತಿ ನೀಡಿದರೆ ಅವರು ಯಾವ ಮಟ್ಟಕ್ಕೂ ಹೋಗಲು ಸಿದ್ದರಾಗಿರುತ್ತಾರೆ. ಪೇಟೆಯ ಮಕ್ಕಳು ಮೊಬೈಲ್ ಆಟದಲ್ಲಿ ಬಿಝಿ ಆಗಿರುವಾಗ ಗ್ರಾಮೀಣಪ್ರದೇಶದ ಮಕ್ಕಳು ಗ್ರಾಮೀಣ ಆಟದಲ್ಲಿ ತೊಡಗಿಸಿಕೊಂಡು ಆರೋಗ್ಯದಲ್ಲಿ ಬಲಿಷ್ಠವಾಗಿದ್ದಾರೆ ಎಂದು ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ನರಿಕೊಂಬು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ 14 ರಿಂದ 17 ವರ್ಷ ವಯಮಿತಿ ಒಳಗಿನ ಬಾಲಕರ ಮತ್ತು ಬಾಲಕಿಯರ “ಜಂಪ್ ರೋಫ್’ ಹಾಗೂ “ರೋಫ್ ಸ್ಕಿಪ್ಪಿಂಗ್” ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನುತಾ ಪುರುಷೋತ್ತಮ ವಹಿಸಿದ್ದರು.
ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್ ಮಾತನಾಡಿ ಕ್ರೀಡೆ ದೈಹಿಕ, ಮಾನಸಿಕ ಶಕ್ತಿಯನ್ನು ಗಟ್ಟಿಗೊಳಿಸುವ ಸಾಧನವಾಗಿದೆ. ಇಲಾಖೆಯಿಂದ ಮಾಡುವ ಕ್ರೀಡೆ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಸಹಕಾರಿಯಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಒಟ್ಟು 429 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.
ನರಿಕೊಂಬು ಶಾಲಾ ಸ್ಥಳದಾನಿಗಳಾದ ಗುರುದತ್ ಭಟ್, ನರಿಕೊಂಬು ಗ್ರಾ.ಪಂ. ಉಪಾಧ್ಯಕ್ಷರಾದ ಪ್ರಕಾಶ್ ಮಡಿಮುಗೆರು, ಸದಸ್ಯರುಗಳಾದ ರಂಜಿತ್ ಕೆದ್ದೇಲ್, ಕಿಶೋರ್ ಶೆಟ್ಟಿ, ಚಿತ್ರಾಕ್ಷಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ಬಿರಾದಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಅಂಚನ್, ಉಪಾಧ್ಯಕ್ಷೆ ಉಷಾಲಾಕ್ಷಿ, ಬಿ ಆರ್ ಸಿ ರಾಘವೇಂದ್ರ ಬಲ್ಲಾಳ್, ನರಿಕೊಂಬು ಗ್ರಾ. ಪಂ. ನ ನಿಕಟಪೂರ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಬಂಟ್ವಾಳ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕಿಯರಾದ ಸುಜಾತ, ಸುದಾ, ಬಾಳ್ತಿಲ ಕ್ಲಸ್ಟರ್ ಸಿ.ಆರ. ಪಿ. ಸತೀಶ್ ರಾವ್, ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಘಟಕದ ಅಧ್ಯಕ್ಷರಾದ ಉಮನಾಥ ರೈ ಮೇರಾವ್,ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ನವೀನ್ ಪಿ ಎಸ್, ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್,ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಲಿಲ್ಲಿ ಪಾಯಸ್, ಉಪಾಧ್ಯಕ್ಷ ಜಗದೀಶ್ ರೈ ತುಂಬೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ರತ್ನಾವತಿ ಕಾರ್ಯದರ್ಶಿ ಸಂತೋಷ್ ಚೆನ್ನೈ ತೋಡಿ, ಸ್ಪರ್ಧೆಯ ತೀರ್ಪುಗಾರರಾದ ಪ್ರೇಮನಾಥ್ ಶೆಟ್ಟಿ ನವೀನ್ ಮೊದಲಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ಭುವನೇಶ್ ಪ್ರಸ್ತಾವನೆಗೈದರು.ನರಿಕಂಬು ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಸ್ವಾಗತಿಸಿ, ಶಿಕ್ಷಕಿವಿಮಲಾ ಪ್ರಸಿಲ್ಲ ಪಿಂಟೋ ವಂದಿಸಿದರು. ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.