ಸ್ತನ್ಯಪಾನ ಹಾಗೂ ಪೋಷನ್ ಅಭಿಯಾನ
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ, ಅಂಗನವಾಡಿ ಕೇಂದ್ರ ಕೆಲಿಂಜ ಇವುಗಳ ಆಶ್ರಯದಲ್ಲಿ ಸ್ತನ್ಯಪಾನ ಹಾಗೂ ಪೋಷನ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಆಟಿಯ ಕೂಟ ಕಾರ್ಯಕ್ರಮ ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಕೆಲಿಂಜ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಚಿತ್ರಾಕ್ಷಿ ಇವರ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಸಮುದಾಯ ಕೇಂದ್ರದ ವೀರಕಂಬ ಗ್ರಾಮ ವ್ಯಾಪ್ತಿಯ ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ.ಕೆ.ಎನ್ ಸ್ತನ್ಯಪಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ವೀರಕಂಬ ಗ್ರಾಮ ಎನ್ .ಆರ್ .ಎಲ್ .ಎಂ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಮಲ್ಲಿಕಾ ಶೆಟ್ಟಿ ಆಟಿ ತಿಂಗಳಲ್ಲಿ ಬಳಸುವ ಆಹಾರ ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಕೆಲಿಂಜ ಸರಕಾರಿ ಪ್ರಾಥಮಿಕ ಶಾಲೆಯ ಕೆ.ಜಿ ಶಿಕ್ಷಕಿ ಪ್ರಣಿತ ಪೌಷ್ಟಿಕ ಆಹಾರಗಳು ಹಾಗೂ ಅವುಗಳ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.ಸ್ತ್ರೀ ಶಕ್ತಿ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿ ತಂದಿರುವ ತಿಂಡಿ, ತಿನಸುಗಳನ್ನು ತಂದು ಪ್ರದರ್ಶನಕ್ಕೆ ಇರಿಸಲಾಯಿತು.
ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ಸಂದೀಪ್, ಕೆಲಿಂಜ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜಯಂತಿ, ಅಂಗನವಾಡಿ ಶಿಕ್ಷಕಿ ರೇವತಿ, ಸಹಾಯಕಿ ವಿಜಯಲಕ್ಷ್ಮಿ, ಶ್ರೀ ಶಕ್ತಿ ಗುಂಪಿನ ಸದಸ್ಯರುಗಳು ಉಪಸ್ಥಿತರಿದ್ದರು.