ಕೇಂದ್ರದ ಜನ, ಕಾರ್ಮಿಕ ವಿರೋಧಿ
ನೀತಿಗಳ ವಿರುದ್ಧ ಸಿಐಟಿಯು ಜಾಥಾ
ಗುರುಪುರ : ಅಭಿವೃದ್ಧಿಯ ಹೆಸರಲ್ಲಿ ದೇಶದ ಸಂಪತ್ತನ್ನು ದೇಶಿ ಮತ್ತು ವಿದೇಶಿ ಬಂಡವಾಳಗಾರರಿಗೆ ಅನಿಯಂತ್ರಿತವಾಗಿ ಲೂಟಿಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಅದಕ್ಕೆ ಪೂರಕವಾಗಿ ಕಾನೂನು ರೂಪಿಸುತ್ತಿದೆ. ಬೆಲೆ ಏರಿಕೆ ಮತ್ತು ಸರ್ಕಾರಗಳ ಜನ ವಿರೋಧಿ ನೀತಿಗಳಿಂದ ಜನರ ಬದುಕು ದುಸ್ತರವಾಗಿರುವ ಈ ದಿನಗಳಲ್ಲಿ ಕೋಮುವಾದಿ ಶಕ್ತಿಗಳು ಜನರ ಐಕ್ಯತೆ ಒಡೆಯುವ ಮೂಲಕ ದೇಶದ ಐಕ್ಯತೆಗೆ ಧಕ್ಕೆಯುಂಟು ಮಾಡುತ್ತಿವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು.

ಸಿಐಟಿಯು ಗುರುಪುರ ವಲಯ ಸಮಿತಿಯಿಂದ ಆ. ೬ರಂದು ವಾಮಂಜೂರಿನಿಂದ ಮುಚ್ಚೂರುವರೆಗೆ ಕೈಗೊಂಡಿರುವ ಪ್ರಚಾರಾಂದೋಲನ ವಾಹನ ಜಾಥಾ ಉದ್ಘಾಟಿಸಿ ಮಾತನಾಡಿ, ಬಡವರು, ಕೂಲಿ ಕಾರ್ಮಿಕರು ಮತ್ತು ರೈತರ ವಿರೋಧಿ ನೀತಿ ರೂಪಿಸುವುದರಲ್ಲೇ ತಲ್ಲೀನವಾಗಿರುವ ಕೇಂದ್ರ ಸರ್ಕಾರ, ಈ ದೇಶದ ರೈಲ್ವೇ, ವಿಮಾನಯಾನ, ವಿದ್ಯುತ್ ಮತ್ತಿತರ ಕ್ಷೇತ್ರ ಖಾಸಗೀಕರಣ ಮಾಡಲು ಹೊರಟಿದೆ. ಈ ಮೂಲಕ ಅದಾನಿ, ಅಂಬಾನಿಯAತಹ ಶ್ರೀಮಂತ ಕುಳಗಳ ವಹಿವಾಟಿಗೆ ಸಹಕರಿಸುತ್ತ, ಬಡವರ ಹೊಟ್ಟೆ ಮೇಲೆ ಚಪ್ಪಡಿ ಕಲ್ಲು ಹಾಕುತ್ತಿದೆ. ಸಂಘಟನೆಯು ಯಾವತ್ತೂ ಸರ್ಕಾರಗಳ ದುರಾಡಳಿತ ಖಂಡಿಸುತ್ತದೆ ಮತ್ತು ನಿರಂತರ ಹೋರಾಟ ಸಂಘಟಿಸುತ್ತದೆ ಎಂದರು.
ಸAಘಟಿತ ವಲಯದ ಕಾರ್ಮಿಕರಿಗೆ ಕೆಲಸದ ಭದ್ರತೆ ಇಲ್ಲ. ಕಾರ್ಮಿಕ ವರ್ಗ ಬಲಯುತಗೊಳಿಸುವ ಬದಲಾಗಿ ಕೇಂದ್ರ ಸರ್ಕಾರವು ೨೯ ಕಾನೂನುಗಳನ್ನು ೪ ಸಂಹಿತೆಯನ್ನಾಗಿಸಿ ಕಾರ್ಮಿಕ ವರ್ಗವನ್ನು ಕಾನೂನುಬದ್ಧ ಗುಲಾಮರನ್ನಾಗಿಸಲು ಹೊರಟಿದೆ. ಭ್ರಷ್ಟಾಚಾರ ಮತ್ತು ನಿರುದ್ಯೋಗ ತುಂಬಿ ತುಳುಕುತ್ತಿದ್ದರೂ, ಪ್ರಧಾನಿ ಮೋದಿ ಇಲ್ಲಿ ಎಲ್ಲವೂ ಸರಿಯಾಗಿರುವಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಸಿಐಟಿಯು ವಾಹನ ಜಾಥಾವು ವಾಮಂಜೂರಿನಿAದ ತಿರುವೈಲು, ಬೊಂಡAತಿಲ, ಮಳಲಿ, ಕುಪ್ಪೆಪದವು, ಇರುವೈಲು, ಮುಚ್ಚೂರುವರೆಗೆ ಸಾಗಿತು. ಕಾರ್ಮಿಕ ಮುಖಂಡರಾದ ಗಂಗಯ್ಯ ಅಮೀನ್, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಭೋಜ ಪೂಜಾರಿ ವಾಮಂಜೂರು, ಬಾಬು ಸಾಲ್ಯಾನ್ ತಿರುವೈಲು, ಬಾಬು ಪೂಜಾರಿ ವಾಮಂಜೂರು, ಹೊನ್ನಯ್ಯ ಅಮೀನ್, ಮುಂಡಪ್ಪ ಪೂಜಾರಿ ಕೆತ್ತಿಕಲ್, ಜಯಶೀಲ ಬೊಂಡAತಿಲ, ಅಶೋಕ್ ಬಂಗೇರ ಬೊಂಡAತಿಲ ಮತ್ತಿತರರು ಇದ್ದರು.