ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ, ವಾಮಂಜೂರು ೨೦೨೩-೨೪ನೇ ಸಾಲಿನ ಪ್ರಾರಂಭೋತ್ಸವ
ವಾಮಂಜೂರು: ಕೌಶಲ್ಯ ತರಬೇತಿಯನ್ನು ನೀಡುವಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೌಶಲ್ಯ ಭರಿತ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತö್ಯ ನೀಡುತ್ತಿದೆ. ಇಲ್ಲಿ ಕಲಿಕೆಯು ೫೦ ಪರ್ಸೆಂಟ್ ಜೊತೆಗೆ ಪ್ರಾಯೋಗಿಕ ಅಭ್ಯಾಸವು ೫೦% ಒಳಗೊಂಡಿರುತ್ತದೆ.

ಹೆಚ್ಚಿನ ಕೌಶಲ್ಯತೆಗೆ ಕಾರ್ಯಗಾರಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಬೃಹತ್ ಕೈಗಾರಿಕೆಗಳಲ್ಲಿ ತರಬೇತಿ ಹೊಂದುವುದು ಇವು ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣಾರ್ಥಿಗಳಿಗೆ ಉಜ್ವಲ ಅವಕಾಶಗಳನ್ನು ಒದಗಿಸಿವೆ ಎಂದು ಉದ್ಯೋಗದಾತರಾದ ಶ್ರೀಯುತ ಅರುಣ್ ಕುಮಾರ್ ಕೆ ವೈ ( ಮ್ಯಾನೇಜಿಂಗ್ ಡೈರೆಕ್ಟರ್, ಸಿಗ್ಮಟೆಕ್ ಸೆಕ್ಯೂರಿಟಿ ಸರ್ವಿಸ್ ಅಂಡ್ ಐಟಿ ನೆಟ್ವರ್ಕ್ ) ಇವರು ಎಸ್ ಡಿ ಎಂ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾರಂಭೋತ್ಸವವನ್ನು ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿ ಹಿತವಚನ ನೀಡಿದರು.

ಪ್ರಾಯೋಗಿಕ ಅಭ್ಯಾಸದಿಂದ ನುರಿತ ಕುಶಲರಾಗಿ ತಮ್ಮ ಸ್ವಂತ ಉದ್ದಿಮೆಯನ್ನು ಹೊಂದಬಹುದು ಹಾಗೂ ಇತರರಿಗೂ ಕೆಲಸವನ್ನು ನೀಡಬಹುದು ಎಂದು ಆಡಳಿತಾಧಿಕಾರಿಯವರಾದ ಶ್ರೀಯುತ ನರೇಶ ಮಲ್ಲಿಗೆ ಮಾಡು ಅವರು ತರಬೇತುದಾರರನ್ನು ಹುರಿದುಂಬಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ಮಂಗಳ ಜ್ಯೋತಿ ವಾಮಂಜೂರು ೨೦೨೩ – ೨೦೨೪ ನೇ ಸಾಲಿಗೆ ದಾಖಲಾತಿ ಪಡೆದುಕೊಂಡ ತರಬೇತುದಾರರನ್ನು ಉದ್ದೇಶಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಯುತ ಪ್ರೊಫೆಸರ್ ಎ ರಾಜೇಂದ್ರ ಶೆಟ್ಟಿಯವರು ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ನರೇಂದ್ರ ಅವರು ಸ್ವಾಗತಿಸಿ, ಶ್ರೀಯುತ ಪ್ರದ್ಯುಮ್ನ ಉಪಾಧ್ಯಾಯರು ವಂದಿಸಿದರು. ಶ್ರೀಯುತ ಶೇಖರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ಶ್ರೀಮತಿ ದೀಪಾಲಕ್ಷಿö್ಮÃ ಇವರು (ಮ್ಯಾನೇಜಿಂಗ್ ಪಾರ್ಟ್ನರ್ ಸಿಗ್ಮಟೆಕ್ ಸೆಕ್ಯೂರಿಟಿ ಸರ್ವಿಸ್ ಅಂಡ್ ಐಟಿ ನೆಟ್ವರ್ಕ್ )ಹಾಗೂ ಸಂಸ್ಥೆಯ ತರಬೇತಿ ಅಧಿಕಾರಿಯಾದ ಶ್ರೀಮತಿ ಪ್ರಪುಲ್ಲ , ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ರಮೇಶ್ ಆಚಾರ್ಯ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಹರಿಣಾಕ್ಷಿಯವರು ಉಪಸ್ಥಿತರಿದ್ದರು.