ಮಂಗಾಜೆ ಗದ್ದೆಗೆ ಬಿದ್ದ ಅಡಿಕೆ ತುಂಬಿದ ರಿಕ್ಷಾ
ಕೈಕಂಬ: ಅಡ್ಡೂರು ಕಡೆಯಿಂದ ಅಡಿಕೆ ತುಂಬಿಸಿಸಿಕೊಂಡು ಬರುತ್ತಿದ್ದ ರಿಕ್ಷಾ ಪೊಳಲಿ ಸಮೀಪದ ಮಂಗಾಜೆ ಎಂಬಲ್ಲಿ ಗದ್ದೆಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ. ಮಂಗಾಜೆ ಸಮೀಪ ಬರುತ್ತಿದ್ದಂತೆ ಸೈಡ್ ಎಳೆದು ಗದ್ದೆಗೆ ಬಿದ್ದಿದೆ ಎನ್ನಲಾಗಿದೆ

ರಿಕ್ಷಾ ದಲ್ಲಿ ಚಾಲಕನೊಬ್ಬನೆ ಇದ್ದು ಬೇರೆ ಯಾರು ಇಲ್ಲದ ಕಾರಣ ಹೆಚ್ಚಿನ ಅನಾಹುತವೊಂದು ತಪ್ಪಿದೆ . ಕೂಡಲೇ ಬಡಕಬೈಲು ಅಟೋ ರಿಕ್ಷಾ ಚಾಲಕರು ಹಾಗೂ ಮಾರ್ಗದಲ್ಲಿ ಹೋಗುತ್ತಿರುವ ವಾಹನ ಸವಾರರು ರಿಕ್ಷವನ್ನು ಮೇಲಕ್ಕೆತ್ತಿದರು.
