Published On: Thu, Aug 3rd, 2023

ಸರಕಾರಿ ಪ್ರೌಢಶಾಲೆ ಪೊಳಲಿಯು ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ಅವರಿಗೆ ನಿವೃತಿ, ಬೀಳ್ಕುಡುಗೆ ಸಮಾರಂಭ

ಕೈಕಂಬ: ಸರಕಾರಿ ನೌಕರಿಯಲ್ಲಿ ೬೦ ವರ್ಷ ತುಂಬಿದ ಕೂಡಲೇ ಸೇವಾ ನಿವೃತ್ತಿ ಕಡ್ಡಾಯ. ನೌಕರರು ವೃತ್ತಿ ಜೀವನದಲ್ಲಿ ಮಾಡಿದ ಅತ್ಯುತ್ತಮ ಕಾರ್ಯಗಳು ಚಿರಸ್ಮರಣೆಯ ಹಾಗೆ ಉಳಿಯುತ್ತದೆ ಇಲ್ಲಿಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಾಧಾಕೃಷ್ಣರ ಕಾರ್ಯಗಳು ಅವಿಸ್ಮರಣಿಯ ಎಂದು ಪೊಳಲಿಯ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು.ಅವರು ಜು. ೩೧ ರಂದು ಸೋಮವಾರ ಸರ್ವಮಂಗಳ ಸಭಾಂಗಣದಲ್ಲಿ ನಡೆದ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ಭಟ್ ಪೊಳಲಿ ಇವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಶ್ರೀ ರಾಜರಾಜೇಶ್ವರೀ ಸರಕಾರಿಪ್ರೌಢಶಾಲೆ ವತಿಯಿಂದ ರಾಧಕೃಷ್ಣ ಭಟ್ ತನುಜ ಅರ್ ಭಟ್ ದಂಪತಿಗಳಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ರಾಜ್ಯ ಸರಕಾರಿ ನೌಕರರ ಸಂಘ ,ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ,ಉಪನಿರ್ದೇಶಕರ ಕಛೇರಿಯಿಂದ ಉಪ ನಿರ್ದೇಶಕರು ಮತ್ತು ಉಪನ್ಯಾಸಕರು, ಅತ್ತಾವರ ಪ್ರೌಢಶಾಲೆ ಶಿಕ್ಷಕರು, ರೋಟರಿ ಕ್ಲಬ್ ಬಂಟ್ವಾಳ, ಸರ್ಕಾರಿ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಉಪನ್ಯಾಸಕರು, ಜಂಟಿ ನಿರ್ದೇಶಕರು , ಕರಿಯಂಗಳ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಸದಸ್ಯರು ,ಶ್ರೀ ವಿದ್ಯಾ ವಿಲಾಸ ಶಾಲೆ ಪೊಳಲಿ ಇವರ ವತಿಯಿಂದ ಸನ್ಮಾನ ಅಭಿನಂದನೆಯ ಮಹಾಪೂರವೇ ಹರಿದು ಬಂದಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಕಾರ್ಯದರ್ಶಿಯಾದ ವೆಂಕಟೇಶ್ ನಾವಡ ಪೊಳಲಿ ಕರಿಯಂಗಳ ಗ್ರಾ. ಪಂ. ಸದಸ್ಯ ಲೋಕೇಶ್ ಭರಣಿ, ಸಿ. ಆರ್.ಪಿ ಪ್ರೇಮಲತಾ, ಮುರಳಿ ಕೃಷ್ಣರಾವ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಹಾಗೂ ಹಿತೈಷಿಗಳು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕಿಯಾದ ರಂಜಿತ ಮತ್ತು ವಿದ್ಯಾರ್ಥಿಗಳಾದ ಚಿನ್ಮಯ್ ಮಹಮ್ಮದ್ ಅನಾಸ್ ಅನಿಸಿಕೆಗಳನ್ನು ತಿಳಿಸಿದರು.

ಪ್ರಭಾರ ಮುಖ್ಯ ಶಿಕ್ಷಕಿಯಾದ ಜಾನೆಟ್ ಲೋಬೊ ಸ್ವಾಗತಿಸಿ ಶ್ರೀ ಜಯಂತ್ ಆಚಾರ್ಯ ವಂದಿಸಿದರು. ಮುರಳಿಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಮತ್ತು ಆಗಮಿಸಿದ ಎಲ್ಲಾ ಅತಿಥಿಗಳಿಗೆ ಭೋಜನ ಏರ್ಪಡಿಸಲಾಗಿತ್ತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter