ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಎನ್.ಸಿ.ಸಿ ಭೂ-ದಳದ ರ‍್ಯಾಂಕ್ ಹಸ್ತಾಂತರ ಕಾರ‍್ಯಕ್ರಮ
ಬಂಟ್ವಾಳ: ವಿದ್ಯಾರ್ಥಿ ಹಂತದಲ್ಲೇ ರಾಷ್ಟ್ರಭಕ್ತಿಯನ್ನು ಮೂಡಿಸಿ, ಅವರಿಗೆ ಶಿಸ್ತಿನ ಮಹತ್ವ ಹಾಗೂ ರಾಷ್ಟ್ರೀಯ ಏಕತೆ, ಸಮಗ್ರತೆ, ಸಾಮಾಜಿಕ ಸಾಮರಸ್ಯವನ್ನು ಅರ್ಥಮಾಡಿಸುವುದು ಎನ್.ಸಿ.ಸಿ ಯ ಗುರಿ ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಯೋಗ ವರ್ಧನ್ ಡಿ.ಎಂ. ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ನಡೆದ ಎನ್.ಸಿ.ಸಿ ಭೂ-ದಳದ ರ‍್ಯಾಂಕ್ ಹಸ್ತಾಂತರ ಕಾರ‍್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಎಸ್. ವಿ. ಎಸ್. ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ ಅಧ್ಯಕ್ಷತೆ ವಹಿಸಿ ೨೦೨೨-೨೩ನೇ ಸಾಲಿನಲ್ಲಿ ಎನ್.ಸಿ.ಸಿ., ಭೂ-ದಳದ ‘ಸಿ’ ಮತ್ತು ‘ಬಿ’ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಉತ್ತೀರ್ಣ ಹಾಗೂ ರಾಷ್ಟ್ರೀಯ ಮಟ್ಟದ ಎನ್‌ಸಿಸಿ ಕ್ಯಾಂಪ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಶುಭಹಾರೈಸಿದರು.

೨೦೨೩-೨೪ನೇ ಸಾಲಿನ ಎನ್.ಸಿ.ಸಿ ಘಟಕದ ರ‍್ಯಾಂಕ್ ಗಳಾದ ಸೀನಿಯರ್ ಕೆಡಿಟ್ ಅಂಡರ್ ಆಫೀಸರ್ ಆಗಿ ನಿಖಿಲ್ ಕುಮಾರ್, ಕೆಡಿಟ್ ಅಂಡರ್ ಆಫೀಸರ್ ಆಗಿ ರೋಲ್ವಿನ್ ಲ್ವಾಯಿಡ್ ರೊಡ್ರೀಗಸ್, ಪ್ರಸ್ತೂತಿ, ಕಂಪನಿ ಹವ್ದಾರ್ ಮೇಜರ್ ಆಗಿ ಜ್ಞಾನೇಶ್ , ವಿಮಿತಾ, ಕಂಪನಿ ಕ್ವಾರ್ಟ್ರ್ ಮಾಸ್ಟರ್ ಸರ್ಜೆಂಟ್ ಆಗಿ ಆಶ್ವಿನ್ ಹೆಚ್. ರೈ, ನಿಖಿತಾ ಹಾಗೂ ೦೪ ಮಂದಿ ಸರ್ಜೆಂಟ್, ೧೧ ಮಂದಿ ಸಿಪಿಎಲ್ ಮತ್ತು ೧೨ ಮಂದಿ ಎಲ್‌ಸಿಪಿಎಲ್ ಪದೋನ್ನತಿ ರ‍್ಯಾಂಕ್ ನ್ನುಹಸ್ತಾಂತರಿಸಲಾಯಿತು.

ವೇದಿಕೆಯಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಸುರ್ದಶನ್ ಬಿ., ಉಪಸಿತ್ಥರಿದ್ದರು.
ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಪ್ರದೀಪ್ ಪೂಜಾರಿ ೨೦೨೨-೨೩ನೇ ಸಾಲಿನ ಎನ್.ಸಿ.ಸಿ ವಿದ್ಯಾರ್ಥಿಗಳ ವಾರ್ಷಿಕ ವರದಿ ಹಾಗೂ ೨೦೨೩-೨೪ನೇ ಸಾಲಿನ ಎನ್.ಸಿ.ಸಿ ಘಟಕದ ನೂತನ ಪದೋನ್ನತಿ ನೀಡಿರುವ ವಿದ್ಯಾರ್ಥಿಗಳ ಮಾಹಿತಿ ವಾಚಿಸಿದರು.

೨೦೨೨-೨೩ನೇ ಸಾಲಿನ ನಿಕಟ ಪೂರ್ವ ಸೀನಿಯರ್ ಕೆಡಿಟ್ ಅಂಡರ್ ಆಫೀಸರ್ ರೋಹನ್ ಶೈಲೆಸ್ ಅನಿಸಿಕೆ ವ್ಯಕ್ತಪಡಿಸಿದರು. ಕೆಡಿಟ್ ಅನುಜ್ಞಾ ಜಿ. ಕುಂದರ್ ಪ್ರಾರ್ಥಿಸಿದರು. ಕೆಡಿಟ್ ಸಂಗಮೇಶ ಕಾರ‍್ಯಕ್ರಮ ನಿರೂಪಿಸಿದರು. ಕೆಡಟ್ ವಿಮಿತಾ ಪಿ. ವಂದಿಸಿದರು.