ಕೆಲಿಂಜ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಾಗಾರ
ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇದರ ಸಮಾಜ ಕಾರ್ಯ ವಿಭಾಗ ( ಎಂ ಎಸ್ ಡಬ್ಲ್ಯೂ)ದ ವತಿಯಿಂದ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮಾಹಿತಿ ಕಾರ್ಯಗಾರವು ವೀರಕಂಬ ಗ್ರಾಮದ ಕೆಲಿಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ವೀರಕಂಬ ಗ್ರಾಮ ವ್ಯಾಪ್ತಿಯ ಸಮುದಾಯ ಆರೋಗ್ಯ ಅಧಿಕಾರಿ ಹರ್ಷಿತ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು.ಶಾಲಾ ಪ್ರಭಾರ ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ್, ಶಿಕ್ಷಕಿ ಉಷಾ ಸುವರ್ಣ, ಆಶಾ ಕಾರ್ಯಕರ್ತೆ ಸ್ನೇಹಲತಾ, ಉಪಸ್ಥಿತರಿದ್ದರು.
ಎಂ. ಎಸ್. ಡಬ್ಲ್ಯೂ ವಿದ್ಯಾರ್ಥಿಗಳಾದ ಕು. ನವ್ಯಶ್ರೀ ಮತ್ತು ಕು. ಶೃತಿ ಪಿ ಅನಿಸಿಕೆಗಳನ್ನುವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕರು , ಮಕ್ಕಳು ಭಾಗವಹಿಸಿದ್ದರು.ಕು. ಪ್ರತೀಕ ಪ್ರಾರ್ಥಿಸಿ,ಕು. ಶಿಲ್ಪ ಸ್ವಾಗತಿಸಿದರು,.ಕು. ಪ್ರೀತಿಕಾ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.