ಗಿಡಗಳನ್ನು ಸಂರಕ್ಷಣೆ ಯೋರ್ವನ ಕರ್ತವ್ಯ :ಬಿರಾದಾರ್
ಬಂಟ್ವಾಳ: ಸಂಘ ಸಂಸ್ಥೆಗಳ ಸಹಕಾರದಲ್ಲಿ ನಾಟಿ ಮಾಡಲಾದ ಗಿಡಗಳ ಸಂರಕ್ಷಣೆ ಜವಾಬ್ದಾರಿ ಗ್ರಾಮಸ್ಥರಿಗೆ ಸೇರಿದ್ದು, ಪ್ರತಿಯೋರ್ವರು ತಮ್ಮ ಕರ್ತವ್ಯ ಎಂದು ಭಾವಿಸಿ ಗಿಡಗಳನ್ನು ಸಂರಕ್ಷಣೆ ಮಾಡಬೇಕೆಂದು ನರಿಕೊಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ಬಿರಾದಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ತುಂಬೆ ವಲಯದ ಪ್ರಗತಿ ಬಂದು ಸ್ವ-ಸಹಾಯ ಸಂಘ ನರಿಕೊಂಬು ‘ಎ’ ಹಾಗೂ ನರಿಕೊಂಬು ‘ಬಿ’ ಒಕ್ಕೂಟ ಹಾಗೂ ನರಿಕೊಂಬು ಗ್ರಾಮ ಪಂಚಾಯತ್ ಇವುಗಳ ಜಂಟಿ ಆಶ್ರಯದಲ್ಲಿ ನಾಯಿಲ ಹಿಂದೂ ರುದ್ರ ಭೂಮಿಯ ವಠಾರದಲ್ಲಿ ಸಾರ್ವಜನಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಗಿಡಗಳ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ವೇಳೆ ಹಿಂದೂ ರುದ್ರ ಭೂಮಿಯ ಆವರಣದಲ್ಲಿ ಗಿಡಗಳ ನಾಟಿ ಮಾಡಲಾಯಿತು ಹಾಗೂ ಯೋಜನೆಯ ಗುಂಪಿನ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು.
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪುರುಷೋತ್ತಮ್, ಜಿಲ್ಲಾ ರೈತ ಮೋರ್ಚಾದ ಸದಸ್ಯರಾದ ಪ್ರೇಮನಾಥ್ ಶೆಟ್ಟಿ ಅಂತರ, ರುದ್ರ ಭೂಮಿ ಆರಾಧನಾ ಸಮಿತಿಯ ಅಧ್ಯಕ್ಷ ಯಶೋಧರ ಕರ್ಬೆಟ್ಟು , ಪಂಚಾಯತ್ ಸದಸ್ಯರುಗಳಾದ ಕಿರಣ್ ಶೆಟ್ಟಿ ಅಂತರ, ರವಿ ಅಂಚನ್, ಅರುಣ್ ಬೋರುಗುಡ್ಡೆ , ರಂಜಿತ್ ಕೆದ್ದೇಲ್, ವಿಶಾಲಾಕ್ಷಿ ರಮಾನಂದ, ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ಕುಸುಮಾವತಿ, ಪ್ರತಿಭಾ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ನರಿಕೊಂಬು ‘ಎ’ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ ಸ್ವಾಗತಿಸಿ, ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಸಂತೋಷ್ ವಂದಿಸಿದರು.