ಇಡ್ಕಿದು: ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೋಹಿನಿ ಪೂಜಾರಿ, ಉಪಾಧ್ಯಕ್ಷರಾಗಿ ಪದ್ಮನಾಭ ಗಾಣಿಗ ಆಯ್ಕೆ
ಬಂಟ್ವಾಳ:ಇಲ್ಲಿನ ಇಡ್ಕಿದು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮೋಹಿನಿ ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಪದ್ಮನಾಭ ಗಾಣಿಗ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ.ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು ಬಂದಿತ್ತು.
ಒಟ್ಟು ೧೯ ಸದಸ್ಯರ ಬಲ ಹೊಂದಿರುವ ಪಂಚಾಯಿತಿನಲ್ಲಿ ಬಿಜೆಪಿ- ೧೫, ಕಾಂಗ್ರೆಸ್-೧, ಆಮ್ ಆದ್ಮಿ ಬೆಂಬಲಿತ ಪಕ್ಷೇತರ-೧ ಮತ್ತು ಎಸ್ ಡಿ ಪಿ ಐ -೨ ಸ್ಥಾನ ಹೊಂದಿದೆ. ಇಲ್ಲಿನ ಪಂಚಾಯಿತಿನಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಪ್ರೀತಂ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.