ಪೊಳಲಿಯ ರಾಮಕೃಷ್ಣ ತಪೋವನದಲ್ಲಿ
ಗ್ರಾಮೀಣ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ
ಕೈಕಂಬ : ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆಶ್ರಮದ ವತಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯ ಸಬಲೀಕರಣ ಕಾರ್ಯಕ್ರಮದಡಿ ಆಯೋಜಿಸಲಾದ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ರಾಮಕೃಷ್ಣ ತಪೋವ£ದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಕೌಶಲ್ಯಾಭಿವೃದ್ಧಿಯ ಈ ಕಾರ್ಯಕ್ರಮದಲ್ಲಿ ಮಹಿಳೆಯರು ತೊಡಗಿಸಿಕೊಂಡಲ್ಲಿ, ಅವರ ಕುಟುಂಬದ ಆರ್ಥಿಕ ಸ್ಥಿತಿ ಒಂದಷ್ಟು ಸದೃಢಗೊಳ್ಳಲಿದೆ. ರಾಮಕೃಷ್ಣ ತಪೋವನವು ಗ್ರಾಮೀಣ ಮಹಿಳೆಯರಿಗೆ ಇಂತಹ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ವರ್ಷಗಳ ಹಿಂದೆ ಇಲ್ಲಿ ಮಾತಾ ಟೈಲರಿಂಗ್ ಸಂಸ್ಥೆ ಮತ್ತು ವಿವೇಕಾನಂದ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯಲಾಗಿದೆ ಎಂದರು. ಮನೆ ಸಂಸಾರ ನಿಭಾಯಿಸಿಕೊಂಡು ಮನೆಯಲ್ಲಿಯೇ ಸ್ವ ಉದ್ಯೋಗ ಮಾಡಿಕೊಂಡು ಸ್ವಾವಲಂಬನೆ ಜೀವನ ಸಾಗಿಸಬೇಕು ಎಂದು ಹೇಳಿದರು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟನಾ, ಇದರ ಮುಖ್ಯ ಕಾರ್ಯ ನಿರ್ವಾನಿಧಿಕಾರಿಯಾದ ಸಚಿನ್ ಹೆಗ್ಡೆ ಮಾತಾಡುತ ಪ್ರತಿಷ್ಠಾನ ದ ಕಾರ್ಯಕ್ರಮಗಳ ಬಗ್ಗೆ, ಮಹಿಳೆಯರು, ರೈತರು, ಸಮುದಾಯದ ಜನರ ಅಭಿವೃದ್ಧಿಗೆ ಹಮ್ಮಿ ಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಮಹಿಳೆಯರು ಸ್ವ ಉದ್ಯೋಗ ತರಬೇತಿ ಪಡೆದು ಉತ್ತಮ ಆದಾಯ ಪಡೆಯಲು ತರಬೇತಿ ಸಹಕಾರಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಮಾಲಿನಿ, ಮಹಿಳಾ ಚಿಂತಕಿ ಮಂಗಳಾ ಭಟ್, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕಾರದ ಜೀವನ್ ಕೊಲ್ಯ, ತರಬೇತುದಾರದಾರ ದಿನೇಶ್ ಉಪಸ್ಥಿತರಿದ್ದರು. ಗ್ರಾಮೀಣ ಪ್ರದೇಶದ ಸುಮಾರು ೪೫ ಮಹಿಳೆಯರು ಭಾಗವಹಿಸಿದ್ದರು.
ಗೆರಟೆಯಿಂದ ಆಭರಣ :
ತರಬೇತಿ ಅವಧಿಯಲ್ಲಿ ಮಹಿಳೆಯರಿಗೆ ತೆಂಗಿನಕಾಯಿ ಗೆರಟೆಯಿಂದ ಗುಬ್ಬಿ(ಬಟನ್), ಹೂಕುಂಡ, ಟೀ-ಕಾಫಿ ತಟ್ಟೆ, ಆಭರಣ ಸರ, ಕಿವಿಯೋಲೆ, ಸ್ಮರಣಿಕೆ(ಕೀ ಚೈನ್) ಮತ್ತಿತರ ಸೊತ್ತು ತಯಾರಿಸುವ ಕಲೆ-ಕೌಶಲ್ಯ ಕಲಿಸಲಾಗುವುದು. ಪ್ರಸಾದನ ಪರಿಕರವಾಗಿ ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಮಂಗಳೂರಿನ ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಠಾನ ಮತ್ತು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
ವನಿತಾ ಸ್ವಾಗತಿಸಿ ತುಷಾರ ವಂದಿಸಿದರು. ಗುಣವತಿ ಕಾರ್ಯಕ್ರಮ ನಿರೂಪಿಸಿದರು.