ಪೊಳಲಿ ಚೆಂಡಿನ ಗದ್ದೆಯಲ್ಲಿ ಭತ್ತದ ನಾಟಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ
ಕೈಕಂಬ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೃಷಿ ಭೂಮಿ ಹಡೀಲು ಬಿದ್ದಿವೆ. ಇಂತಹ ಗದ್ದೆಗಳಲ್ಲಿ ಯಾಂತ್ರೀಕೃತ ಭತ್ತ ನಾಟಿ ಮಾಡಿದರೆ ಇಳುವರಿ ಹೆಚ್ಚುವುದರೊಂದಿಗೆ ಬೇಸಾಯ ಕರ್ಚು ಕಡಿಮೆಯಾಗಿ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಜು. ೨೮ರಂದು ಶುಕ್ರವಾರ ಯಾಂತ್ರೀಕೃತ ಭತ್ತದ ನಾಟಿಗೆ ಚಾಲನೆ ನೀಡಿ ಮಾತನಾಡಿದರು. ಚೆಂಡಿನ ಗದ್ದೆಯಲ್ಲಿ ಕಳೆದ ಎರಡು ವರ್ಷದಿಂದ ಊನವರು ಮತ್ತು ಬಂಟ್ವಾಳ ಕೃಷಿ ಇಲಾಖೆಯ ಸಹಯೋಗದಲ್ಲಿ ಯಾಂತ್ರೀಕೃತ ಭತ್ತದ ನಾಟಿ ಮಾಡಲಾಗುತ್ತಿದೆ. ಇದರಿಂದ ಉತ್ತಮ ಆದಾಯ ಬಂದಿದೆ. ಜಿಲ್ಲೆಯಲ್ಲಿ ಸಾಕಷ್ಟು ಹಡೀಲು ಗದ್ದೆಗಳಿದ್ದು, ಅಲ್ಲೂ ಭತ್ತದ ಕೃಷಿ ಮಾಡುವ ಅಗತ್ಯ ಕಂಡು ಬಂದಿದೆ ಎಂದರು.
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಮಾತನಾಡಿ, ಹಡೀಲು ಗದ್ದೆಗಳಲ್ಲಿ ಭತ್ತದ ಬೇಸಾಯ ಮಾಡಿದರೆ ಅಧಿಕ ಭತ್ತ ಪಡೆಯಲು ಸಾಧ್ಯವಿದೆ. ಜಿಲ್ಲೆಯಲ್ಲಿ ಸುಮಾರು ೨೫೦ ಹೆಕ್ಟೇರು ಪ್ರದೇಶದಲ್ಲಿ ಹಡೀಲು ಬಿದ್ದಿರುವ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಸಂಘ-ಸAಸ್ಥೆಗಳು, ದೇವಸ್ಥಾನದ ಆಡಳಿತಗಳು, ಕೃಷಿಕರು ಕೈಜೋಡಿಸುವ ಅಗತ್ಯವಿದೆ ಎಂದರು.
ಮAಗಳೂರು ಉಪವಿಭಾಗದ ಉಪ ಕೃಷಿ ನಿರ್ದೇಶಕಿ ಭಾರತಿ, ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ. ಆರ್., ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಪಿ., ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್, ತಾಪಂ ಮಾಜಿ ಸದಸ್ಯರಾದ ಯಶವಂತ ದೇರಾಜೆ, ಯಶವಂತ ಪೊಳಲಿ, ಕರಿಯಂಗಳ ಪಂಚಾಯತ್ ಮಾಜಿ ಅಧ್ಯಕ್ಷೆ ಚಂದ್ರಾವತಿ, ಪೊಳಲಿ ವೆಂಕಟೇಶ್ ನಾವಡ, ಪಶುಪತಿ ಗೌಡ, ಹನುಮಂತ ಕಾಳಗಿ, ನಿತಿನ್ ಸಚಿನ್, ಸುಕೇಶ್ ಚೌಟ, ಕುಮಾರ್ ಪೊಳಲಿ,ಚಂದ್ರಶೇಖರ ಶೆಟ್ಟಿ, ಕೃಷಿಕರಾದ ಸೇಸಪ್ಪ , ಗೋಪಾಲಕೃಷ್ಣ , ನಾರಾಯಣ ಪೂಜಾರಿ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.