ಗುರುಪುರದಿಂದ ನಾಪತ್ತೆಯಾಗಿದ್ದ ಪ್ರಶಾಂತ್ ಪೂಜಾರಿ ಹಾಸನದಲ್ಲಿ ಪತ್ತೆ, ಕರಕೊಂಡು ಬಂದ ಬಜಪೆ ಪೋಲಿಸರು
ಕೈಕಂಬ : ಗುರುಪುರ ಚಾಮಣಿ ನಿವಾಸಿ ಪ್ರಶಾಂತ್ (45) ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಕ್ಕೋಡಿ ಎಂಬಲ್ಲಿನ ಎಸ್ಟೇಟ್ ಒಂದರಲ್ಲಿ ಪತ್ತೆಯಾಗಿದ್ದು, ಬಜಪೆ ಪೊಲೀಸರು ಆತನನ್ನು ಕಳೆದ ರಾತ್ರಿ ಮನೆಗೆ ಕರೆದುಕೊಂಡು ಬಂದಿದ್ದಾರೆ.

ವ್ಯವಹಾರದಲ್ಲಿ ಬಾರಿ ಸಾಲ ಮಾಡಿಕೊಂಡಿದ್ದ ಈತ ಜುಲೈ ಏಳರಿಂದ ನಾಪತ್ತೆಯಾಗಿದ್ದ. ನಾಪತ್ತೆಯಾದ ಈತನ ಸ್ಕೂಟರ್ ಗುರುಪುರ ಪಲ್ಗುಣಿ ಸೇತುವೆ ಬಳಿ ಪತ್ತೆಯಾಗಿದ್ದು, ಸ್ಥಳೀಯರು ನದಿಯಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದ್ದರು.
ಬಜಪೆ ಠಾಣಾಧಿಕಾರಿ ಪ್ರಕಾಶ್ ರವರ ನೇತೃತ್ವದಲ್ಲಿ ಪೋಲಿಸ್ ಅಧಿಕಾರಿಗಳಾದ ರೇವಣ ಸಿದ್ದಪ್ಪ, ರಾಮಣ್ಣ ಪೂಜಾರಿ, ಸೃಜನ್ ಅವರಿದ್ದ ತಂಡ ಪ್ರಶಾಂತನನ್ನು ಪತ್ತೆ ಹಚ್ಚಿ ಗುರುಪುರಕ್ಕೆ ತಂದಿದೆ.