ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ದೃಢಕಲಶೋತ್ಸವ
ಬೆಂಜನಪದವು: ಶ್ರೀ ಭದ್ರಕಾಳಿ ದೇವಸ್ಥಾನದ ದೃಢಕಲಶವು ಜು.೯ರಂದು ಭಾನುವಾರ ಶ್ರೀ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ನಡೆಯಿತು.
ಗಣಪತಿ ಹೋಮ, ಪ್ರಧಾನ ಹೋಮ,ಪರಿವಾರ ಸಾನಿಧ್ಯಗಳಿಗೆ ನವದೃಢಕಲಾಶಾಭಿಷೇಕ ಭದ್ರಕಾಳಿ ಅಮ್ಮನವರಿಗೆ ಪಂಚವಿಂಶತಿ ಕಲಶಾಭಿಷೇಕ ಪ್ರಸನ್ನ ಪೂಜೆ, ಶ್ರೀ ಭದ್ರಕಾಳಿ ಅಮ್ಮನವರಿಗೆ ಪ್ರಭಾವಳಿ ಸಮರ್ಪಣೆ, ಮಹಾ ಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಂತರ ಲಿಕಿತ್‌ರಾಜ್ ಬಳಗದಿಂದ ಭಜನಾ ಸಂಕೀರ್ತನೆ ನಡೆಯಿತು.
ಕ್ಷೇತ್ರದ ಧರ್ಮದರ್ಶಿ ರಮೇಶ್ ಬಿ. , ಉಮೇಶ್ ಸಾಲಿಯಾನ್, ತಾರನಾಥ್ ಕೊಟ್ಟಾರಿ , ಈಶ್ವರ ಬೆಲ್ಚಡ,ಬಾಬು ಕೊಟ್ಠಾರಿ ವಲಚ್ಚಿಲ್, ಚಂದ್ರಶೇಖರ ಸುವರ್ಣ,ಪ್ರವೀನ್ ಬಾಬ ಮತ್ತು ಕ್ಷೇತ್ರದ ಭಕ್ತಾಧಿಗಳು ಇದ್ದರು.