Published On: Tue, Jul 11th, 2023

ಕುಪ್ಪೆಪದವು ಜೈನ್ ಮಿಲನ್,ಪದಗ್ರಹಣ ಸಮಾರಂಭ

 ಕೈಕಂಬ: ” ಸಾಮಾಜಿಕ ಸಂಸ್ಥೆ ಯೊಂದು ಸೇವಾ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡಿ ಜನರ ಸಾಮಾಜಿಕ ಸಬಲೀಕರಣಕ್ಕೆ ಶಕ್ತಿ ನೀಡಿ,ತನ್ನಿಂದ ಸಾಧ್ಯವಾದಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಪುಟ್ಟದಾದ ಕುಪ್ಪೆಪದವು ಜೈನ್ ಮಿಲನ್ ಮಾಡಿ ತೋರಿಸಿದೆ ಗಾತ್ರ ಸಣ್ಣದಾದರೂ ತಾವು ಯಾವುದರಲ್ಲೂ ಇತರ ಜೈನ್ ಮಿಲನ್ ಗಿಂತ ಕಡಿಮೆಯಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ ಎಂದು ಸುದರ್ಶನ್ ಜೈನ್‌ ಹೇಳಿದರು. ಅವರು ಭಾನುವಾರ ಕುಪ್ಪೆಪದವು ಅನಂತ ಪಾರ್ಶ್ವ ಜೈನ್ ಮಿಲನ್,ಕುಪ್ಪೆಪದವು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಜೈನ್ ಮಿಲನ್ ವಲಯ – 8 ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಿಲನ್ ನ ಮಂಗಳೂರು ವಲಯ ಕಾರ್ಯದರ್ಶಿ ಯವರಾದ ವೀರ್ ಸುಭಾಶ್ಚಂದ್ರ ಜೈನ್  ಪ್ರಸ್ತುತ ಮಿಲನ್ ಪದಾಧಿಕಾರಿಗಳ ಕಾರ್ಯವನ್ನು  ಶ್ಲಾಘಿಸುತ್ತಾ , ನೂತನ  ಮಹಿಳಾ ಪದಾಧಿಕಾರಿಗಳ ತಂಡ ಇನ್ನೂ ಉತ್ತಮ. ಕೆಲಸ ಕಾರ್ಯ ಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಮತ್ತೋರ್ವ ಅತಿಥಿಗಳಾದ  ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ  ಜೊತೆ ಕಾರ್ಯದರ್ಶಿಯಾದ ವೀರಾಂಗನಾ ಶ್ವೇತಾ ಜೈನ್ ರವರು ಮಾತನಾಡುತ್ತಾ  ಕೆಲವೇ ಜೈನ್ ಕುಟುಂಬಗಳು ಇರುವುದಾದರೂ  ಕುಪ್ಪೆಪದವು ಜೈನ್ ಮಿಲನ್ ತನ್ನ ಕಾರ್ಯ ಚಟುವಟಿಕೆ ಗಳಿಂದ ಒಳ್ಳೆಯ ಹೆಸರು ಗಳಿಸಿದೆ  ಅದಕ್ಕಾಗಿ  ಪ್ರಸ್ತುತ  ತಂಡವನ್ನು ಅಭಿನಂದಿಸೋಣ ಎನ್ನುತ್ತಾ ,ನಿಯೋಜಿತ ಪದಾಧಿಕಾರಿಗಳಿಗೆ  ಶುಭ ಕೋರಿದರು.

ವಲಯ ನಿರ್ದೇಶಕರಾದ ವೀರ್ ಜಯರಾಜ್ ಕಂಬಳಿ ಯವರು  ನೂತನ ಪದಾಧಿಕಾರಿ ಗಳಿಗೆ ಪ್ರಮಾಣ ವಚನ ಭೋದಿಸಿ ,ಶುಭಾಶಯ ಕೋರಿದರು.

ಅಧ್ಯಕ್ಷರಾಗಿ ವೀರಾಂಗನಾ ಸ್ವರ್ಣಲತಾ ಜೈನ್,ಕಾರ್ಯದರ್ಶಿಯಾಗಿ ವೀರಾಂಗನ್  ಹರ್ಷಲತ ಜೈನ್,ಕೋಶಾಧಿಕಾರಿಯಾಗಿ ವೀರಾಂಗನ್ ವನಿತಾ ಜೈನ್ ರವರು  ಅಧಿಕಾರ ವಹಿಸಿಕೊಂಡರು. ನಮ್ಮನಗಲಿದ ಹಿರೇಕೊಡಿಯ ಜೈನ ಮುನಿ 108 ಕಾಮಕುಮಾರ ನಂದಿ ಮಹಾರಾಜ ರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

2021- 2023 ಸಾಲಿನ ವರದಿಯನ್ನು ಕಾರ್ಯದರ್ಶಿ ಶಶಿಕಲಾ ವಾಚಿಸಿದರು. ಇದೇ ಸಂದರ್ಭದಲ್ಲಿ  ಯಾವುದೇ ಪಾಲಪೇಕ್ಷೆ ಯಿಲ್ಲದೆ ನಿರಂತರವಾಗಿ ಸ್ಥಳಾವಕಾಶ,ದ್ವನಿವರ್ದಕ,ಮುಂತಾದ ಸೇವೆಯನ್ನು ಜೈನ್ ಮಿಲನ್ ಗೆ ನೀಡುತ್ತಿರುವ ವೀರ್ ಅಜಿತ್ ಕುಮಾರ್ ಜೈನ್ ರವರನ್ನು  ಸನ್ಮಾನಿಸಲಾಯಿತು.

ಅಧ್ಯಕ್ಷರಾದ ವೀರ್ ಅಕ್ಷಯ ಕುಮಾರ್ ರವರು  ಪ್ರಾಸ್ತಾವಿಕ ಭಾಷಣ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು.ಕು.ಪೂರ್ವಿಕ ಪ್ರಾರ್ಥನೆ ನೆರವೇರಿಸಿದರು,ಕು. ಅದ್ವಿತ ವಂದನಾರ್ಪಣೆ ಗೈದರು.

ವೇದಿಕೆಯಲ್ಲಿ ಮಿಲನ್ ಪ್ರಮುಖರಾದ  ಪ್ರವೀಣ್ ಅಗರಿ,ಕಿಳೆಂಜಾರು ಅರಮನೆ ದಿನೇಶ್ ಬಲ್ಲಾಳ್, ಸ್ತಾಪಕಾದ್ಯಕ್ಷರಾದ ಭೋಜರಾಜ್ ಜೈನ್. ಖಜಾಂಚಿ ವೀರ್ ಅನಂತ ಕೇಸರಿ ಉಪಸ್ಥಿತರಿದ್ದರು.

ಕು. ಉಜ್ವಲಾ ಕಾರ್ಯಕ್ರಮ ನಿರ್ವಹಿಸಿದರು.ವೀರ್ ಪದ್ಮಪ್ರಸಾದ್ ಜೈನ್ ರವರ ಶಾಂತಿ ಮಂತ್ರ ದೊಡನೆ ಕಾರ್ಯಕ್ರಮ ಮುಕ್ತಾಯ ವಾಯಿತು.ನಂತರ ಮಿಲನ್ ಸದಸ್ಯರಿಗೆ ಕ್ವಿಜ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter