ಗುರುಪುರ ಬಂಟರ ಮಾತೃ ಸಂಘದ ದಶಮಾನೋತ್ಸವ ಸಂಭ್ರಮ
ಜು. ೧೬ಕ್ಕೆ ವಾಮಂಜೂರಿನಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ
ಕೈಕಂಬ: ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು, ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್(ರಿ) ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ(ರಿ) ಇವುಗಳ ಸಹಯೋಗದಲ್ಲಿ ಜು. ೧೬ರಂದು ಸಂಘದ ದಶಮಾನೋತ್ಸವ ಸಮಾರಂಭ ಜರುಗಲಿದೆ.
ವಾಮಂಜೂರು ಚರ್ಚ್ ಸಭಾಭವನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮಿ ಅವರು ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ತಾಲೂಕು ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ವಸಂತ ಶೆಟ್ಟಿ ದೀಪ ಪ್ರಜ್ವಲಿಸಲಿದ್ದಾರೆ. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ವಾಮಂಜೂರು ಸಂತ ಜೋಸೆಫರ ಚರ್ಚ್ ಧರ್ಮಗುರು ರೆ. ಫಾ. ಜೇಮ್ಸ್ ಡಿ’ಸೋಜ, ವಿಶ್ವನಾಥ ಶೆಟ್ಟಿ ಕರ್ನಿರೆ((ಉಪಾಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು), ಮಂಜುನಾಥ ಭಂಡಾರಿ ಶೆಡ್ಡೆ(ಆಡಳಿತ ಮೊಕ್ತೇಸರ, ಶ್ರೀ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನ, ಆದ್ಯಪಾಡಿ), ಅಶೋಕ್ ಕೆ. ಶೆಟ್ಟಿ(ಮುಂಬೈ ಉದ್ಯಮಿ), ಪಂಕಜಾ ಶೆಟ್ಟಿ(ಪಿಡಿಒ, ಗುರುಪುರ ಪಂಚಾಯತ್), ರಾಜೇಶ್ ಮೇಂಡ(ಪ್ರಗತಿಪರ ಕೃಷಿಕ), ಯಶವಂತ ಶೆಟ್ಟಿ(ಉದ್ಯಮಿ ಪುಣೆ) ಮತ್ತು ಸುಭಾಷ್ ಭಂಡಾರಿ ಕೋರಂಗಳಗುತ್ತು(ಪ್ರಗತಿಪರ ಕೃಷಿಕ) ಉಪಸ್ಥಿತಲಿರುವರು. ಸಮಾಜದ ಗಣ್ಯಾತಿಗಣ್ಯರು ಪಾಲ್ಗೊಳ್ಳುವರು.
ಬೆಳಿಗ್ಗೆ ೯:೩೦ರಿಂದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮುರಳೀಧರ ಹೆಗ್ಡೆ(ಸಾಮಾಜಿಕ ಕ್ಷೇತ್ರ. ಅಧ್ಯಕ್ಷ, ಬೆಂಗಳೂರು ಬಂಟರ ಸಂಘ) ಮತ್ತು ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು(ಕೃಷಿ ಮತ್ತು ಕಂಬಳ ಕ್ಷೇತ್ರ) ಅವರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಅಭಿನಂದನೆ, ಸಂಘ ವ್ಯಾಪ್ತಿಯ ೧೬ ಗ್ರಾಮಗಳ ಅನ್ಯ ಸಮಾಜದ ೧೦೦ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಗೌರವ ಧನ ಸಮರ್ಪಣೆ, ಬೆಳಿಗ್ಗೆ ೧೧ರಿಂದ ದಶಮ ಸಂಭ್ರಮ'ದ ಅಂಗವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ಬಂಟ ಕಲಾವಿದರ ನೃತ್ಯ ಸ್ಪರ್ಧಾ ಸಮ್ಮಿಲನ
ಯುವ ಸಂಭ್ರಮ-೨೦೨೩ ಹಾಗೂ ವಾರ್ಷಿಕ ಮಹಾಸಭೆ’ ಜರುಗಲಿದೆ.
ಸಂಜೆ ೪:೩೦ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಅವರು ಆಶೀರ್ವಚನ ನೀಡಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಅಧ್ಯಕ್ಷ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಸದಾಶಿವ ಶೆಟ್ಟಿ ಕನ್ಯಾನ(ಮಹಾದಾನಿಗಳು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಶಾಸಕರಾದ ಡಾ. ಭರತ್ ಶೆಟ್ಟಿ ಮತ್ತು ಸುರೇಶ್ ಶೆಟ್ಟಿ ಗುರ್ಮೆ, ಸಮಾಜದ ಗಣ್ಯರಾದ ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ-ಧಾರವಾಡ, ರತ್ನಾಕರ ಶೆಟ್ಟಿ ಮುಂಡ್ಕೂರು, ಜಯಕರ ಶೆಟ್ಟಿ ಇಂದ್ರಾಳಿ, ಮೋಹನದಾಸ್ ಶೆಟ್ಟಿ ಉಳ್ತೂರು, ಪ್ರವೀಣ್ ಭೋಜ ಶೆಟ್ಟಿ, ಸತೀಶ್ ಶೆಟ್ಟಿ ಪಟ್ಲ, ರಾಕೇಶ್ ಶೆಟ್ಟಿ ಬೆಳ್ಳಾರೆ, ವೇಣುಗೋಪಾಲ ಎಲ್. ಶೆಟ್ಟಿ, ರಾಜೇಂದ್ರ ಶೆಟ್ಟಿ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ದೇವಿಚರಣ್ ಶೆಟ್ಟಿ, ಸಿಎ ಎನ್. ಬಿ. ಶೆಟ್ಟಿ ಮತ್ತು ಲ. ಸಂಜಿತ್ ಶೆಟ್ಟಿ ಉಪಸ್ಥಿತಲಿರುವರು.