ಬಾರ್ದಿಲ ಸಾಂಬಸದಾಶಿವ ದೇವಸ್ಥಾನ: ಬಾಲಾಲಯದಲ್ಲಿ ಶ್ರೀದೇವರ ಪ್ರತಿಷ್ಠೆ, ನೂತನ ಗರ್ಭಗುಡಿ ನಿರ್ಮಾಣ ಸಮಾಲೋಚನಾ ಸಭೆ
ಕೈಕಂಬ: ಸಂಪೂರ್ಣ ಜೀರ್ಣೋದ್ದಾರಗೊಳ್ಳುತ್ತಿರುವ ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಬಾರ್ದಿಲ ಶ್ರೀಸಾಂಬ ಸದಾಶಿವ ದೇವಸ್ಥಾನದ ನೂತನ ಗರ್ಭಗುಡಿ ನಿರ್ಮಾಣ ಮತ್ತು ಶ್ರೀದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲು ಬಾಲಾಲಯ ನಿರ್ಮಾಣ ಕುರಿತಂತೆ ಸಮಾಲೋಚನಾ ಸಭೆಯು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೋಮಶೇಖರ್ ಶೆಟ್ಟಿ ಉಳಿಪಾಡಿಗುತ್ತು ಮತ್ತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಅವರ ನೇತೃತ್ವದಲ್ಲಿ ಭಾನುವಾರ ಕ್ಷೇತ್ರದಲ್ಲಿ ನಡೆಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯ ರುಕ್ಮಯ ನಾಯ್ಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಆಗಸ್ಟ್ 31 ರಂದು ಗರ್ಭಗುಡಿಯಲ್ಲಿರುವ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣ ಕಾರ್ಯ ಪ್ರಾರಂಭವಾಗಳಿದ್ದು, ಬಾಲಾಲಯ ನಿರ್ಮಾಣ ಮತ್ತು ಶಿಲಾಮಯ ಗರ್ಭಗುಡಿ ನಿರ್ಮಾಣ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೋಮಶೇಖರ್ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಆಳ್ವ, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ ಮಾತನಾಡಿ ಶ್ರೀದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನೆ ಮತ್ತು ಬಳಿಕ 10 ತಿಂಗಳ ಒಳಗಡೆ ಗರ್ಭಗುಡಿ ನಿರ್ಮಾಣವಾಗಬೇಕಾಗಿದ್ದು ಭಕ್ತರು ಸರ್ವ ರೀತಿಯ ಸಹಕಾರ ನೀಡುವ ಜತೆಯಲ್ಲಿ ಜೀರ್ಣೋದ್ದಾರದ ಪ್ರತಿ ಹಂತದಲ್ಲೂ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು ಎಂದರು.
ಇರುವೈಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀಕುಮಾರ್ ಶೆಟ್ಟಿ, ಕುಪ್ಪೆಪದವು ಶ್ರೀದುರ್ಗೇಶ್ವರೀ ದೇವಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಅಗರಿ,ಕಿಲೆಂಜಾರು ಅರಮನೆಯ ಮುಖ್ಯಸ್ಥ ದಿನೇಶ್ ಕುಮಾರ್ ಬಲ್ಲಾಳ್, ರಾಮಚಂದ್ರ ಸಾಲ್ಯಾನ್, ಗಿರೀಶ್ ಆಳ್ವ, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಪ್ರಸಾದ್ ಶೆಟ್ಟಿ ಬೊಂಡಾಲ ಇರುವೈಲು, ಸತೀಶ್ಚಂದ್ರ ಪಾಣಿಲ ಇರುವೈಲು, ಕುಪ್ಪೆಪದವು ದುರ್ಗೆಶ್ವರೀ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಕುಪ್ಪೆಪದವು, ಜಗದೀಶ್ ಶೆಟ್ಟಿ ದೊಡ್ಡಗುತ್ತು, ವಿನಯ ಕಾರಂತ, ಕುಪ್ಪೆಪದವು ಶ್ರೀದುರ್ಗೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತ, ವಿನೋದ್ ಕುಮಾರ್ ಅಂಬೆಲೊಟ್ಟು,ಶಿವರಾಮ ಕಾರಂತ ಮೊದಲಾದವರು ಸಭೆಯಲ್ಲಿ ಮಾತನಾಡಿ ಸಲಹೆ- ಸೂಚನೆಗಳನ್ನು ನೀಡಿದರು.
ಅಂದಾಜು 2ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರಗೊಳ್ಳುತ್ತಿರುವ ದೇವಸ್ಥಾನದ ಸುತ್ತು ಪೌಳಿ ಮತ್ತು ಗೋಪುರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗ ಇರುವ ಸುಮಾರು 30 ವರ್ಷ ಹಳೆಯ ಗರ್ಭಗುಡಿಯನ್ನು ತೆರವುಗೊಳಿಸಿ ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣವಾಗಲಿದೆ. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಕಾರಂತ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ ಕಟ್ಟಪುಣಿ,ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಮಂಜುಳಾ ಕಾಪಿಕಾಡು, ಶ್ರೀಮತಿ ವಿಜಯಾ ಕಲ್ಲಾಡಿ, ಸದಾನಂದ ಶೆಟ್ಟಿ ಕುಲವೂರುಗುತ್ತು,ದಿನೇಶ್ ಶೆಟ್ಟಿ ದೊಡ್ಡಗುತ್ತು,ಉರ್ಮಿಲ ಸೋಮಶೇಖರ್ ಶೆಟ್ಟಿ ಉಳಿಪಾಡಿಗುತ್ತು, ಕುಮಾರ್ ಪೂಜಾರಿ ಇರುವೈಲು,ಅರುಣಾ ಶೆಟ್ಟಿ ಬಾರ್ದಿಲ, ಸುನಿಲ್ ಪೂಜಾರಿ ಬಾರ್ದಿಲ, ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು, ದೇವಸ್ಥಾನದ ಮೇಲ್ವಿಚಾರಕ ಭಾಸ್ಕರ್ ಶೆಟ್ಟಿ ಬಾರ್ದಿಲ , ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರು, ಕಿಲೆಂಜಾರು, ಇರುವೈಲು, ಕುಲವೂರು, ಮುತ್ತೂರು ಗ್ರಾಮಗಳ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.ಜೀರ್ಣೋದ್ದಾರ ಸಮಿತಿಯ ಜತೆ ಕಾರ್ಯದರ್ಶಿ ಶಿವರಾಮ್ ಶೆಟ್ಟಿ ಉಳಿಪಾಡಿಗುತ್ತು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.