ಕೋಡಿಕಲ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ಉಚಿತ
ಆರೋಗ್ಯ ತಪಾಸಣೆ ; ಸ್ಲೇಟ್, ಬ್ಯಾಗ್ ವಿತರಣೆ
ಕೈಕಂಬ: ವಿಶ್ವ ವೈದ್ಯರ ದಿನಾಚರಣೆಯಂದು ಕೋಡಿಕಲ್ ಬಾಬೂಜಿನಗರದ ಅಂಗನವಾಡಿ ಕೇಂದ್ರದಲ್ಲಿ ಕೋಡಿಕಲ್‌ನ `ನಮ್ಮ ಕ್ಲಿನಿಕ್’ ವತಿಯಿಂದ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ಸನ್ಮತಿ ಚಾರಿಟೇಬಲ್ ಟ್ರಸ್ಟ್(ರಿ) ಮಂಗಳೂರು ಮತ್ತು ಗಣೇಶ್ ಪ್ರಭು ಇವರ ಕೊಡುಗೆಯಾಗಿ ಸ್ಲೇಟು ಮತ್ತು ಬ್ಯಾಗ್ ವಿತರಿಸಲಾಯಿತು.
ಕೋಡಿಕಲ್ `ನಮ್ಮ ಕ್ಲಿನಿಕ್’ ವೈದ್ಯಾಧಿಕಾರಿ ಡಾ. ದೀಕ್ಷಾ ಮತ್ತು ಸಿಬ್ಬಂದಿಯು ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆಗೈದು ಸೂಕ್ತ ಚಿಕಿತ್ಸೆ ನೀಡಿದರು. ಡಾ. ದೀಕ್ಷಾ ಅವರು ಅಧ್ಯಕ್ಷತೆ ವಹಿಸಿದ್ದರು. ಕು. ನಿಶ್ಮಿತಾ ಪ್ರಾರ್ಥನೆಗೈದರು. ಸನ್ಮತಿ ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷ ಈಶ್ವರ ಪೂಜಾರಿ ಪ್ರಸ್ತಾವಿಸಿದರು.
ಗಣೇಶ್ ಭಟ್ ಮಾತನಾಡಿ, ಇಂತಹ ಸಮಾಜಮುಖಿ ಕೆಲಸ ಮಾಡುವಲ್ಲಿ ಉತ್ತಮ ಮನಸ್ಸು, ಹುಮ್ಮಸ್ಸು ಇರಬೇಕಾಗುತ್ತದೆ. `ಕೆರೆಯ ನೀರು ಕೆರೆಗೆ ಚೆಲ್ಲು’ ಎಂಬ ಮಾತಿನಂತೆ ಇಂತಹ ಪುಣ್ಯದ ಕಾರ್ಯದಲ್ಲಿ ಭಾಗವಹಿಸಲು ತುಂಬ ಸಂತೋಷವಾಗುತ್ತಿದೆ ಎಂದರು.ಬಾಬು ಜಗಜೀವನ್‌ರಾಮ್ ಸಂಘದ ಕೋಶಾಧಿಕಾರಿ ರವಿರಾಜ, ಆಶಾ ಕಾರ್ಯಕರ್ತೆ ರೇಖಾ, ಅಂಗನವಾಡಿ ಕೇಂದ್ರದ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಇಂದಿರಾ ನಿರೂಪಿಸಿದರೆ, ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆ ಕುಶಲಾ ಈಶ್ವರ್ ವಂದಿಸಿದರು. ಬಾಬೂಜಿನಗರದ ಮಕ್ಕಳಿಗಾಗಿ ಸಂಪನ್ಮೂಲ ವ್ಯಕ್ತಿ ಹರಿಣಿ ಮತ್ತು ಕು. ಬಿಂದಿಯಾ ವ್ಯಕ್ತಿತ್ವ ವಿಕಸನದ ವಿವಿಧ ಚಟುವಟಿಕೆ ನಡೆಸಿಕೊಟ್ಟರು.