ಕೈಕಂಬ : ಅಡ್ಡೂರು ಜಂಕ್ಷನ್‌ಗೆ ಸಮೀಪ ಸ್ಕೂಟರ್ ಮತ್ತು ಲಾರಿಯೊಂದು ಮುಖಾಮುಖಿ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಪಲ್ಲಿಪಾಡಿ ಪುಂಚಮೆಯಿಂದ ಪೊಳಲಿ ಮಾರ್ಗವಾಗಿ ಗುರುಪುರ-ಕೈಕಂಬದತ್ತ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿ ಅಡ್ಡೂರು ಜಂಕ್ಷನ್‌ನಿAದ ಸ್ವಲ್ಪ ಮುಂದೆ, ಎದುರು ದಿಕ್ಕಿನಿಂದ ಕಳಸಗುರಿಯಿಂದ ಅಡ್ಡೂರು ಜಂಕ್ಷನ್‌ನತ್ತ ಸಾಗುತ್ತಿದ್ದ ಸ್ಕೂಟರ್ ತರಾತುರಿಯಲ್ಲಿ ರಸ್ತೆ ಕ್ರಾಸ್ ಮಾಡಿದ ವೇಳೆ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕನು ಬೈಕ್ ಸವಾರನನ್ನು ಅಪಾಯದಿಂದ ಪಾರು ಮಾಡಲು ಯತ್ನಿಸಿದ ವೇಳೆ ಲಾರಿ ಪಲ್ಟಿ

ಹೊಡೆದು ಕೆಂಪು ಕಲ್ಲು ರಸ್ತೆಗೆ ಎಸೆಯಲ್ಪಟ್ಟಿದೆ. ತಲೆಗೆ ಬಲವಾದ ಏಟು ತಗುಲಿ ರಕ್ತಸಿಕ್ತಗೊಂಡ ಸ್ಕೂಟರ್ ಸವಾರ ಕಳಸಗುರಿಯ ಕೋಡಿಬೆಟ್ಟು ನಿವಾಸಿ, ಕೃಷಿಕ ಬಾಲಕೃಷ್ಣ ಶೆಟ್ಟಿ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯ ಹಿಂದಿನಿAದ ಯುವಕನೊಬ್ಬ ಚಲಾಯಿಸುತ್ತಿದ್ದ ಸ್ಕೂಟರ್ ಬ್ರೇಕ್ ಹಾಕಿದ ಪರಿಣಾಮ ರಸ್ತೆ ಬದಿಯ ತೋಡಿಗೆ ಬಿದ್ದು, ಜಖಂಗೊAಡಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

By Suddi9

Leave a Reply

Your email address will not be published. Required fields are marked *