ನಾಗಶ್ರೀ ಮಿತ್ರ ವೃಂದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಕಮ್ಮಾಜೆ ಪ್ರದಾನ ಕಾರ್ಯದರ್ಶಿ ಯಾಗಿ ತಿಮ್ಮಪ್ಪ ಕಮ್ಮಾಜೆ ಆಯ್ಕೆ
ಕೈಕಂಬ:ನಾಗಶ್ರೀ ಮಿತ್ರ ವೃಂದ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ ಇದರ ವಾರ್ಷಿಕ ಮಹಾಸಭೆಯು ಜೂ.೧೧ರಂದು ಭಾನುವಾರ ತೆಂಕಬೆಳ್ಳೂರು ನಾಗಶ್ರೀ ವಿವೇಕ ಭವನ ದಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಕಮ್ಮಾಜೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮಪ್ಪ ಕಮ್ಮಾಜೆ ಅವರನ್ನು ಆಯ್ಕೆ ಮಾಡಲಾಯಿತು.
ನಾಗಶ್ರೀ ಮಿತ್ರ ವೃಂದ ( ರಿ.) ಕಮ್ಮಾಜೆ, ತೆಂಕಬೆಳ್ಳೂರು. ೨೦೨೨-೨೩ ನೇ ಸಾಲಿನ ಕಾರ್ಯಕ್ರಮಗಳ ಅವಲೋಕನ ಮತ್ತು ವಾರ್ಷಿಕ ವರದಿ ಮಂಡಿಸಲಾಯಿತು. ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಮತ್ತು ೨೦೨೩-೨೪ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು,
೨೦೨೩ -೨೪ ನೇ ಸಾಲಿನ ನೂತನ ಪದಾಧಿಕಾರಿಗಳು ಗೌರವ ಅಧ್ಯಕ್ಷರು ಶ್ರೀ ಅನಂತರಾಮ್ ಹೇರಳ ಗೌರವ ಮಾರ್ಗದರ್ಶಕರು ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅಧ್ಯಕ್ಷರು ಪುಷ್ಪರಾಜ್ ಕಮ್ಮಾಜೆ, ಉಪಾಧ್ಯಕ್ಷರು ಸಂದೀಪ್ ಕಮ್ಮಾಜೆ, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಕಮ್ಮಾಜೆ, ಜೊತೆ ಕಾರ್ಯದರ್ಶಿ ದಿತೇಶ್ ಕಮ್ಮಾಜೆ , ಕೋಶಾಧಿಕಾರಿ ದೀಕ್ಷಿತ್ ಕಮ್ಮಾಜೆ, ಕ್ರೀಡಾ ಕಾರ್ಯದರ್ಶಿ ಯತೀಶ್ ಕಮ್ಮಾಜೆ , ಕ್ರೀಡಾ ಜೊತೆ ಕಾರ್ಯದರ್ಶಿ ಲಕ್ಷ್ಮೀಶ ಕಮ್ಮಾಜೆ , ಕಾನೂನು ಸಲಹೆಗಾರರು ತೀರ್ಥ ಕಮ್ಮಾಜೆ, ಸಂಘಟನಾ ಕಾರ್ಯದರ್ಶಿಗಳು ತಿರುಮಲೇಶ್ ಕಮ್ಮಜೆ ,,ಹರೀಶ್ ಮುಡೈಕೋಡಿ , ದಿನೇಶ್ ಕಮ್ಮಾಜೆ, ಪ್ರಜ್ವಲ್ ಕಮ್ಮಾಜೆ, ತಿಲಕ್ ಹೆಬ್ಬಾರಾಬೆಟ್ಟು ಇವರುಗಳನ್ನು ಆಯ್ಕೆ ಮಾಡಲಾಯಿತು.