ಶ್ರೀ ಧರ್ಮಶಾಸ್ತ ಭಜನಾ ಮಂದಿರ , ಶ್ರೀ ರಕ್ತೇಶ್ವರೀದೇವಿಯ ಗುಡಿಗೆ ಶಿಲಾನ್ಯಾಸ
ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಸಾಣೂರುಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರ , ಶ್ರೀ ರಕ್ತೇಶ್ವರೀ ದೇವಿಯ ಗುಡಿಗೆ ಶಿಲಾನ್ಯಾಸ ಜೂ. ೧೨ರಂದು ಸೋಮವಾರ ನಡೆಯಿತು. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕ ಅನಂತ ಭಟ್ ಭೂಮಿಪೂಜೆ ನೆರವೇರಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಮಾಜಿ ಸಚಿವ ಬಿ ರಮಾನಾಥ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಕರಿಯಂಗಳ ಗ್ರಾಂ. ಪಂ. ಅಧ್ಯಕ್ಷ ಚಂದ್ರಹಾಶ ಪಲ್ಲಿಪಾಡಿ ,ಮಾ.ತಾ.ಪಂ ಸದಸ್ಯರಾದ ವೆಂಕಟೇಶ್ ನಾವಡ ಪೊಳಲಿ, ಯಶವಂತ ಪೊಳಲಿ, ಕರಿಯಂಗಳ ಗ್ರಾಂ.ಪಂ. ಉಪಾಧ್ಯಕ್ಷೆ ವೀಣಾ ಆಚಾರ್ಯ, ಗ್ರಾ.ಪಂ. ಸದಸ್ಯರಾದ ಲಕ್ಷ್ಮೀಶ ಶೆಟ್ಟಿ, ರಾಜೂ ಕೋಟ್ಯಾನ್ ಗರೋಡಿ, ಬೆಳ್ಳೂರು ವಲಯದ ಬಂಟರ ಸಂಘದ ಅಧ್ಯಕ್ಷ ಕೆ. ಜನಾರ್ಧನ ಶೆಟ್ಟಿ ಕನ್ಯಬೆಟ್ಟು, ಸುಕೇಶ್ ಚೌಟ ಬಡಕಬೈಲು, ಉದ್ಯಮಿ ಶೇಖರ ಪದಂಗಡಿ, ಕಿಶೋರ್ ಪಲ್ಲಿಪಾಡಿ, ಸಂತೋಷ್ ಹೆಗ್ಡೆ, ಕೆ. ಯಶೋಧರ ಪೊಳಲಿ ಪಂಚಗ್ರಾಮ ಬಿಲ್ಲವ ಸಂಘದ ಕಾರ್ಯದರ್ಶಿ ರೋಶನ್ ಪುಂಚಮೆ, ಬಡಕಬೈಲ್ ಚಂದ್ರಶೇಖರ ಶೆಟ್ಟಿ, ಉಮೇಶ್ ಆಚಾರ್ಯ ಕರಿಯಂಗಳ, ಸತೀಶ್ ಪುಂಚಮೆ, ಪ್ರಸಾದ್ ಗರೋಡಿ, ವಿಶ್ವನಾಥ ಪೂಜಾರಿ, ದೇವಪ್ಪ ಭಂಡಾರಿ ಶ್ರೀ ಧರ್ಮಶಾಸ್ತ ಭಜನಾ ಮಂದಿರದ ಅಧ್ಯಕ್ಷ ಅಜಯ್ , ರಕ್ತೇಶ್ವರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಹರಿನಾಕ್ಷಿ ಮತ್ತು ಊರಿನ ಭಕ್ತಾಧಿಗಳು ಇದ್ದರು.



