ಹೋರಾಟಕ್ಕೆ ಸಿಕ್ಕ ಅಭೂತಪೂರ್ವ ಜಯ : ಹೋರಾಟಗಾರರ ಹರ್ಷೋದ್ಘಾರ
ವಾಮಂಜೂರು ಅಣಬೆ ಫ್ಯಾಕ್ಟರಿ ಬಂದ್‌ಗೆ ಡೀಸಿ ಆದೇಶ
ಸಂಜೆಯೊಳಗೆ ಸೀಲ್ ಪ್ರಕ್ರಿಯೆ ಪೂರ್ಣ : ಡೀಸಿ ರವಿ ಕುಮಾರ್
ಕೈಕಂಬ: ವಾಮಂಜೂರು ಪ್ರದೇಶಕ್ಕೆ ದುರ್ವಾಸನೆ ಬೀರುತ್ತಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಫ್ಯಾಕ್ಟರಿ ಇಂದಿನಿAದಲೇ ಬಂದ್ ಆಗಲಿದ್ದು, ಸಂಜೆಯೊಳಗೆ ಫ್ಯಾಕ್ಟರಿಗೆ ಸೀಲ್ ಹಾಕಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿ ಕುಮಾರ್ ಎಂ. ಆರ್. ಅವರು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ವಾಮಂಜೂರು ತಿರುವೈಲು ವಾರ್ಡ್ನ ಆಶ್ರಯನಗರದಲ್ಲಿ ಕಳೆದ ಎರಡು ವರ್ಷದಿಂದ ಮಂಗಳೂರಿನ ಜೆ. ಆರ್. ಲೋಬೊ ಮತ್ತು ವಾಮಂಜೂರಿನ ಅಲ್ವಾರಿಸ್ ಕುಟುಂಬ ಸದಸ್ಯರ ಮಾಲಕತ್ವದಲ್ಲಿ ಕಾರ್ಯಾಚರಿಸುತ್ತಿರುವ ಅಣಬೆ ಫ್ಯಾಕ್ಟರಿಯಿಂದ ದಿನದ ಹೆಚ್ಚಿನ ಅವಧಿಯಲ್ಲಿ ಕೆಮಿಕಲ್‌ಯುಕ್ತ ದುರ್ವಾಸನೆ ಹೊರಸೂಸುತ್ತಿದ್ದು, ಫ್ಯಾಕ್ಟರಿ ಮುಚ್ಚುವಂತೆ ಆಗ್ರಹಿಸಿ ವೈಟ್‌ಗ್ರೋ ಅಣಬೆ ಫ್ಯಾಕ್ಟರಿ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.
ಶನಿವಾರ ಸಂಜೆ ಪ್ರತಿಭಟನಾ ಸ್ಥಳದಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ತುರ್ತು ಪತ್ರಿಕಾಗೋಷ್ಠಿ ಕರೆದು ಭಾವಾರ ಮಧ್ಯಾಹ್ನದೊಳಗೆ ಜಿಲ್ಲಾಡಳಿತದಿಂದ ಸೂಕ್ತ ಪ್ರತಿಕ್ರಿಯೆ ಲಭಿಸದೆ ಹೋದಲ್ಲಿ, ಪ್ರತಿಭಟನೆ ಬೇರೆ ದಿಕ್ಕಿನತ್ತ ತಿರುಗಬಹುದು. ಅಂತಹ ಬೆಳವಣಿಗೆಗಳಿಗೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದರು.
ಭಾನುವಾರ ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯವರು ಸಂತ್ರಸ್ತರ ದೂರು ಆಲಿಸಿದರು. “ಫ್ಯಾಕ್ಟರಿ ದುರ್ವಾಸನೆಯಿಂದ ನಮಗೆ ನೆಮ್ಮದಿ ಇಲ್ಲದಂತಾಗಿದೆ. ಶಾಲಾ ಮಕ್ಕಳ ಸಹಿತ ವಯೋವೃದ್ಧರು ಹಾಗೂ ಇತರರಿಗೆ ತುರಿಕೆ, ಅಲರ್ಜಿ, ವಾಂತಿಯAತಹ ಆರೋಗ್ಯ ಸಮಸ್ಯೆ ಉಂಟಾಗಿದೆ. ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿರುವ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ಭದ್ರತೆ ಇಲ್ಲ ಮತ್ತು ಮಾಲಕರಿಂದ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಯುತ್ತಿರುವ ವಿಷಯವೂ ಬೆಳಕಿಗೆ ಬಂದಿದೆ. ಜನರ ಬದುಕಿಗೆ ಮಾರಕವೆನಿಸಿರುವ ಫ್ಯಾಕ್ಟರಿ ಮುಚ್ಚಿಬಿಡಿ” ಎಂದು ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಸಂತ್ರಸ್ತರು ಡೀಸಿಗೆ ಮನವಿ ಮಾಡಿದರು.
ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, “ಅಣಬೆ ಫ್ಯಾಕ್ಟರಿಯಿಂದ ಹೊರ ಬರುತ್ತಿರುವ ದುವಾಸನೆ ಎಂತಹದ್ದೆAದು ನನಗೆ ಚೆನ್ನಾಗಿ ಅರಿವಿದೆ. ಈ ಬಗ್ಗೆ ಡೀಸಿಯವರಿಗೆ ಹಲವು ಬಾರಿ ಮನವರಿಕೆ ಮಾಡಿದ್ದೇನೆ. ಸುಖಾಸುಮ್ಮನೆ ಮಹಿಳೆಯರು ಮತ್ತು ಇತರರು ಕೆಲಸ ಮತ್ತು ನಿದ್ದೆ ಬಿಟ್ಟು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದಿಲ್ಲ. ಜನರಿಗೆ ಬದುಕುವ ಹಕ್ಕಿದ್ದು, ಅದಕ್ಕಾಗಿ ಹೋರಾಟದ ಹಾದಿ ಹಿಡಿದಿರುವ ಅವರನ್ನು ಬದುಕಲು ಬಿಡಿ. ಜಿಲ್ಲಾಡಳಿತದಿಂದ ಅವರ ಮೇಲೆ ಕರುಣೆ ತೋರಿಸುವ ಕೆಲಸ ಆಗಬೇಕಿದೆ” ಎಂದರು.
ದುರ್ವಾಸನೆ ಬೀರುವ ಅಣಬೆ
ಫ್ಯಾಕ್ಟರಿ ಬಂದ್‌ಗೆ ಡೀಸಿ ಆದೇಶ :
`ಅಣಬೆ ಫ್ಯಾಕ್ಟರಿಯಿಂದ ಹೊರಸೂಸುವ ದುರ್ವಾಸನೆ ತಡೆಯಬೇಕು, ನಮ್ಮನ್ನು ಬದುಕಲು ಬಿಡಬೇಕು. ಪರಿಸರವಾಸಿಗಳ ಆರೋಗ್ಯ ಕೆಡಿಸುತ್ತಿರುವ ಕೆಮಿಕಲ್ ದುರ್ವಾಸನೆ ಬೀರುತ್ತಿರುವ ಜನರು ಅನಾರೋಗ್ಯಪೀಡಿತರಾಗುತ್ತಿದ್ದಾರೆ ಎಂಬ ದೂರು ನೀಡಿದ್ದೀರಿ. ಬದುಕಲು ಆಗುತ್ತಿಲ್ಲ ಮತ್ತು
ನಮ್ಮ ಗಾಳಿ ನಮ್ಮ ನೀರುನಮ್ಮ ಹಕ್ಕು’ ಎಂಬ ರೀತಿಯಲ್ಲಿ ಪ್ರತಿಭಟನೆ ನಡೆದ್ದೀರಿ. ಈ ಹಿನ್ನೆಲೆಯಲ್ಲಿ ದುರ್ವಾಸನೆ ಬೀರುವಂತಹ ಅಣಬೆ ಫ್ಯಾಕ್ಟರಿ ಇಂದೇ ಮುಚ್ಚುವಂತೆ ಆದೇಶಿಸುತ್ತಿದ್ದೇನೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಸಂಜೆಯೊಳಗೆ ಫ್ಯಾಕ್ಟರಿ ಮುಚ್ಚಲು ಅಗತ್ಯವಿರುವ ಪ್ರಕ್ರಿಯೆ ನಡೆಯಲಿದೆ. ಸಂಜೆ ಫ್ಯಾಕ್ಟರಿಗೆ ಸೀಲ್ ಹಾಕಲಾಗುವುದು” ಎಂದು ಜಿಲ್ಲಾಧಿಕಾರಿ ಪ್ರಕಟಿಸುತ್ತಲೇ ಪ್ರತಿಭಟನಾಕಾರರು ಅತ್ಯುತ್ಸಾಹದಿಂದ ಡೀಸಿ ಹಾಗೂ ಸಹಕರಿಸಿದ ಎಲ್ಲರಿಗೂ ಘೋಷಣೆಗಳ ಮೂಲಕ ಅಭಿನಂದನೆ ಸಲ್ಲಿಸಿದರು.
ಫ್ಯಾಕ್ಟರಿ ಬಂದ ಮಾಡುವ ಬಗ್ಗೆ ಡೀಸಿಯವರು ಮೌಖಿಕ ಆದೇಶ ನೀಡಿದ್ದಾರೆಯೇ ಹೊರತು ಲಿಖಿತ ಪ್ರಕ್ರಿಯೆ ನಡೆದಿಲ್ಲ. ಆದ್ದರಿಂದ ಫ್ಯಾಕ್ಟರಿಗೆ ಅಂತಿಮವಾಗಿ ಸೀಲ್ ಹಾಕುವವರೆಗೆ ಮುಷ್ಕರ ಮುಂದುವರಿಸಲು ಸಂತ್ರಸ್ತರು ನಿರ್ಧರಿಸಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ಪ್ರಸ್ತಾವಿಸಿದರು. ಮೇಯರ್ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್, ಮನಪಾ ಆಯುಕ್ತ ಚನ್ನಬಸಪ್ಪ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಉಪತಹಶೀಲ್ದಾರ್ ಶಿವಕುಮಾರ್, ರಾಜೇಶ್ ಕೊಟ್ಟಾರಿ, ಓಂ ಪ್ರಕಾಶ್ ಶೆಟ್ಟಿ, ರಿಯಾಝ್ ವಾಮಂಜೂರು, ಉಮರಬ್ಬ, ಜಯಪ್ರಭಾ, ಸ್ಟಾö್ಯನಿ ಕುಟಿನ್ಹೋ, ಲಕ್ಷ್ಮಣ್ ಶೆಟ್ಟಿಗಾರ, ಹರಿಪ್ರಸಾದ್ ವಾಮಂಜೂರು, ರಘು ಸಾಲ್ಯಾನ್, ಅನಿಲ್ ರೈ ವಾಮಂಜೂರು, ಡಾ. ರಮಾನಂದ, ಡಾ. ಕಾರ್ತಿಕ್ ರೈ, ಶ್ರೀನಿವಾಸ , ಜಯಂತಿ ಪೂಜಾರಿ, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಹೆರಾಲ್ಡ್ ಫ್ರಾನ್ಸಿಸ್ ಅಲ್ವಾರಿಸ್, ಹೆವಿಕಾ ಮೆಲಾನಿ ಅಲ್ವಾರಿಸ್, ಉಮರಬ್ಬ, ರಜಾಕ್ ವಾಮಂಜೂರು ಹಾಗೂ ಆಶ್ರಯನಗರ, ಓಂಕಾರನಗರ, ತಿರುವೈಲು ವಾಮಂಜೂರಿನ ನೂರಾರು ನಾಗರಿಕರು ಇದ್ದರು.