ಪೊಳಲಿ ಸರಕಾರಿ ಪ್ರೌಢಶಾಲೆ ಪ್ರಥಮ ಪೋಷಕರ ಸಭೆ
ಪೊಳಲಿ:ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ೨೦೨೩-೨೪ ಸಾಲಿನ ಪ್ರಥಮ ಪೋಷಕರ ಸಭೆಯು. ಮಂಗಳವಾರ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ಭಟ್ ವಹಿಸಿದ್ದರು.ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ರಾವ್ ಪೋಷಕರನ್ನುದ್ದೇಶಿಸಿ ಮಾತನಾಡಿದರು.

೨೦೨೨ ೨೩ ನೇ ಸಾಲಿನಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹೂ ಮತ್ತು ಸ್ಮರಣೆಕೆ ನೀಡಿ ಅಭಿನಂದಿಸಲಾಯಿತು. ಎನ್ಎಂಎಂಎಸ್ ಇದರಲ್ಲಿ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿನಿಯರಿಗೆ ಸ್ಮರಣೆಗೆ ನೀಡಿ ಅಭಿನಂದಿಸಲಾಯಿತು. ವೆಂಕಟೇಶ್ ನಾವಡ ಪೊಳಲಿ , ಪೋಷಕರು , ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ಶ್ರೀಮತಿ ಜಾನೆಟ್ ಲೋಬೊ ಸ್ವಾಗತಿಸಿ ಶ್ರೀಮತಿ ಉಮಾ ನಿರೂಪಿಸಿದರು. ಶ್ರೀಮತಿ ರಂಜಿತ ಅಭಿನಂದನ ಕಾರ‍್ಯಕ್ರಮ ನಿರೂಪಿಸಿದರು.
