Published On: Sun, May 28th, 2023

ಮಂಗಳೂರು ಉತ್ತರದ ಶಾಸಕ

ಡಾ. ಭರತ್ ಶೆಟ್ಟಿ ವಿಜಯೋತ್ಸವ

ಕೈಕಂಬ: ಮಂಗಳೂರು ನಗರ ಉತ್ತರ ಕ್ಷೇತ್ರದಿಂದ ೩೨,೯೨೨ ಮತಗಳ ಅಂತರದಿಂದ ೨ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರು ಭಾನುವಾರ ಪಕ್ಷ ಕಾರ್ಯಕರ್ತರು ಹಾಗೂ ಬೆಂಬಲಿಗರೊAದಿಗೆ ವಿಜಯೋತ್ಸವ ಕೈಗೊಂಡರು.

ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಓಪನ್ ಜೀಪ್ ಡ್ರೆವ್ ಮಾಡಿದ ಡಾ. ಭರತ್ ಶೆಟ್ಟಿ ಅವರು ಮಂಗಳಜ್ಯೋತಿ, ವಾಮಂಜೂರು ಜಂಕ್ಷನ್ ಮೂಲಕ ಗುರುಪುರ ಜಂಕ್ಷನ್, ಕೈಕಂಬ, ಕಂದಾವರ, ಮಳಲಿ, ಗಂಜಿಮಠ, ಮುತ್ತೂರು, ಕುಪ್ಪೆಪದವು, ಎಡಪದವು, ಮುಚ್ಚೂರು, ಸುಂಕದಕಟ್ಟೆ ಮೂಲಕ ವಾಮಂಜೂರಿನ ಜ್ಯೋತಿನಗರದವರೆಗೆ ವಿಜಯೋತ್ಸವ ಮುಂದುವರಿಸಿದರು.

ವಿಜಯೋತ್ಸವ ಮುಂದುವರಿದ ಪ್ರಮುಖ ಸ್ಥಳಗಳಲ್ಲಿ ಕಾರ್ಯರ್ಕರು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ಕೆಲವೆಡೆ ಶಾಲು ಹಾಕಿ ಗೌರವಿಸಲಾಯಿತು. ಮಳಲಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ಭೇಟಿ ನೀಡಿದ ಶಾಸಕರಿಗೆ ಹಿತೈಷಿಗಳು ಶಾಲು ಹೊದಿಸಿ ಗೌರವಿಸಿದರು.

ಮೆರವಣಿಗೆಯಲ್ಲಿ ನೂರಾರು ವಾಹನಗಳು ಒಳಗೊಂಡಿದ್ದವು. ಡಾ. ಭರತ್ ಶೆಟ್ಟಿ ಅವರೊಂದಿಗೆ ಬಿಜೆಪಿ ಮುಖಂಡರಾದ ತಿಲಕ್‌ರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಸುಕುಮಾರ್ ದೇವಾಡಿಗ, ಪ್ರಸಾದ್ ಕುಮಾರ್ ಎಡಪದವು, ರಾಜೇಶ್ ಸುವರ್ಣ, ಶ್ರೀಕರ ವಿ. ಶೆಟ್ಟಿ, ಓಂಪ್ರಕಾಶ್ ಶೆಟ್ಟಿ, ವಿಜಯ್ ಅಲೈಗುಡ್ಡೆ, ವಿನೋದ್, ಶ್ಯಾಮರಾಯ ಆಚಾರ್ಯ, ಸುನಿಲ್ ಜಲ್ಲಿಗುಡ್ಡೆ, ಜಿ. ಎಂ. ಉದಯ ಭಟ್, ಸಾದಿಕ್ ಅಡ್ಡೂರು, ಸುಜನ್‌ದಾಸ್ ಕುಡುಪು ಹಾಗೂ ನೂರಾರು ಕಾರ್ಯಕರ್ತರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter