ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್(ರಿ)
ಮಾಜಿ ಶಾಸಕ ದಿ. ಶಿವರಾವ್
ಸ್ಮರಣಾರ್ಥ ಪುಸ್ತಕ ವಿತರಣೆ
ಕೈಕಂಬ : ಉಳಾಯಿಬೆಟ್ಟಿನ ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್(ರಿ) ಇದರ ಆಶ್ರಯದಲ್ಲಿ ಭಾನುವಾರ(ಮೇ. ೨೮) ಕ್ಲಬ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದಿ. ಶಿವರಾವ್ ಅವರ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.

ಕ್ಲಬ್‌ನ ಕಾರ್ಯದರ್ಶಿ ಶ್ರೀನಾಥ್ ಮಾತನಾಡಿ, ಕ್ಲಬ್ ಮೂಲಕ ದಿ. ಶಿವರಾವ್ ಅವರ ಸ್ಮರಣಾರ್ಥ ಅವರ ಪುತ್ರ ಉದ್ಯಮಿ ಎನ್. ರವಿರಾಜ್ ರಾವ್ ಅವರು ಕಳೆದ ೨೨ ವರ್ಷದಿಂದ ಪೆರ್ಮಂಕಿ ಗ್ರಾಮದ ಶಾಲಾ ಮಕ್ಕಳಿಗೆ ಓದುವ ಪುಸ್ತಕ ವಿತರಿಸುತ್ತ ಬಂದಿದ್ದಾರೆ. ದಾನಿಗಳು ನೀಡಿದ ಈ ಕೊಡುಗೆಯ ಸದುಪಯೋಗಗೊಳಿಸುವುದರೊಂದಿಗೆ ಎಲ್ಲರೂ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಮತ್ತು ಸಮಾಜದ ಋಣ ತೀರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಕ್ಲಬ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕ್ಲಬ್‌ನ ಗೌರವಾಧ್ಯಕ್ಷ ಎನ್. ರವಿರಾಜ್ ರಾವ್ ಅವರು ಮಕ್ಕಳಿಗೆ ಪುಸ್ತಕ ವಿತರಿಸಿದರು. ಕ್ಲಬ್‌ನ ಮಾಜಿ ಅಧ್ಯಕ್ಷರಾದ ಭಾಸ್ಕರ್ ಅಮೀನ್, ದಾಮೋದರ್, ಶ್ರೀಧರ್ ಪಿ., ಅಧ್ಯಕ್ಷ ಪ್ರಶಾಂತ್ ಸಲ್ಡಾನ, ಸದಸ್ಯ ಜೀವಿತ್, ಚಂದ್ರಹಾಸ ಪೂಜಾರಿ, ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಮಕ್ಕಳ ಪಾಲಕರು ಇದ್ದರು. ಈ ಬಾರಿ ಒಟ್ಟು ೯೦ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.