ಬಂಟಾಶ್ರಯ ನೂತನ ಮನೆಯ ಹಸ್ತಾಂತರ , ಗ್ರಹಪ್ರವೇಶೋತ್ಸವ
ಕೈಕಂಬ: ಬಂಟ್ವಾಳ ತಾಲೂಕಿನ ಬಂಟರ ಸಂಘ ಬೆಳ್ಳೂರು ವಲಯದ ವತಿಯಿಂದ ಬಡ ಕುಟುಂಬಕ್ಕೆ ನೂತನವಾಗಿ ನಿರ್ಮೀಸಿದ “ಬಂಟಾಶ್ರಯ”ಮನೆಯ ಹಸ್ತಾಂತರವನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಬುಧವಾರ ಸುಂದರಿ ಶೆಟ್ಟಿ ಯವರಿಗೆ ಹಸ್ತಾಂತರಿಸಿದರು.
ಗ್ರಹಪ್ರವೇಶೋತ್ಸವದ ಪ್ರಯುಕ್ತ ಬೆಳಗ್ಗೆ ಗಣಹೋಮ ಹಾಗೂ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.
ನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ಕೆ. ಜನಾರ್ಧನ ಶೆಟ್ಟಿ ವಹಿಸಿದ್ದರು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನ ನೀಡಿದರು. ಮಾಜಿ ಸಚಿವ ಬಿ. ರಮಾನಾಥ ರೈ , ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ,ಬಂಟವಾಳ ಬಂಟರ ಸಂಘದ ಮಹಿಳಾ ಅಧ್ಯಕ್ಷೆ ರಮಾ ಎಸ್.ಭಂಡಾರಿ, ಬಡಗಬೆಳ್ಳೂರು ಗ್ರಾಂ.ಪಂ.ಅಧ್ಯಕ್ಷ ಪ್ರಕಾಶ್ ಆಳ್ವ, ಬಂಟರ ಸಂಘದ ಯುವ ಅಧ್ಯಕ್ಷ ನಿಶಾನ್ ಆಳ್ವ, ಬಡಕಬೈಲ್ ಸಂಕಪ್ಪ ಶೇಖ, ಸಂಧ್ಯಾ ಡಿ.ರೈ , ಲಕ್ಷ್ಮೀಶ್ ಶೆಟ್ಟಿ, ಗುಣಪಾಲ ಶೆಟ್ಟಿ ,ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟ ಪ್ರಣಾಮ್ ರೈ ಅವರನ್ನು ಸನ್ಮಾನಿಸಲಾಯಿತು.
ನರೇಶ್ ಶೆಟ್ಟಿ ಸ್ವಾಗತಿಸಿ ಕಿಶೋರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಶೆಟ್ಟಿ ವಂದಿಸಿದರು.