ಡಾ. ಶೆಟ್ಟಿ ಅವರಿಗೆ ಎಲ್ಲೆಡೆಯೂ ಸಾರ್ವಜನಿಕರಿಂದ ಭಾರೀ ಬೆಂಬಲ
ಕೈಕಂಬ : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಆಪೇಕ್ಷೆಯಂತೆ ಮತ್ತೊಂದು ಅವಧಿಗೆ ಶಾಸಕನಾಗಬೇಕೆಂದುಕೊಂಡಿರುವ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರು ಮತಯಾಚನೆ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳತ್ತ ವಿಶೇಷ ಗಮನಹರಿಸಿದ್ದಾರೆ.
ಅಡ್ಯಾರು, ಉಳಾಯಿಬೆಟ್ಟು, ಪೆರ್ಮಂಕಿ, ನೀರುಮಾರ್ಗ, ಎಡಪದವು, ಮುಚ್ಚೂರು, ಕಂದಾವರ, ಆದ್ಯಪಾಡಿ, ಮಳಲಿ ಮತ್ತಿತರ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ಮಹಿಳೆಯರು, ಮಯೋವೃದ್ಧರ ಹಾಗೂ ಪಕ್ಷ ಹಿತೈಷಿಗಳನ್ನು ಸಂಪರ್ಕಿಸುತ್ತಿರುವ ಡಾ. ಶೆಟ್ಟಿ ಅವರಿಗೆ ಎಲ್ಲೆಡೆಯೂ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಹಂತದಲ್ಲಿ ರಣ ಬಿಸಲು ಲೆಕ್ಕಿಸದೆ ಚಯುನಾವಣಾ ಆಖಾಢದಲ್ಲಿ ಡಾ. ಶೆಟ್ಟಿ ಅವರು ಪಾದರಸದಂತೆ ಮತ ಯಾಚನೆ ಮಾಡುತ್ತಿದ್ದಾರೆ. ಇವರ ಮತ ಯಾಚನೆ ಭರಾಟೆ ಎದುರು ವಿಪಕ್ಷಗಳ ಮತಬೇಟೆ ಸದ್ದಡಗಿದಂತಾಗಿದೆ.
ಸೋಮವಾರದಿಂದ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಮನೆಗೂ ತೆರಳಿ ಮತ ಯಾಚಿಸಲಿರುವ ಡಾ. ಶೆಟ್ಟಿ ಅವರು, “ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಮತ ಯಾಚನೆ ನಡೆಸಿದ ಪ್ರತಿಯೊಂದು ಸಂದರ್ಭದಲ್ಲೂ ಜನರು ನಗುಮುಖದಲ್ಲೇ ಸ್ವಾಗತಿಸಿ, ಅಭಿವೃದ್ಧಿ ಕಾರ್ಯಗಳ ಗುಣಗಾನ ಮಾಡಿದ್ದಾರೆ. ಕಾರ್ಯರ್ತರೊಂದಿಗೆ ದಿನದ ೧೮ ತಾಸು ಕ್ಷೇತ್ರದಲ್ಲಿ ಓಡಾಡಿ, ಪ್ರತಿಯೊಬ್ಬರ ಆಕಾಂಕ್ಷೆ ಅರಿತುಕೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಇನ್ನಷ್ಟು ಸಲಭವಾಗಿ ಕಾರ್ಯಪ್ರವೃತ್ತವಾಗಲು ಸಾಧ್ಯವಾಗಲಿದೆ. ಜನರ ಬೇಡಿಕೆ ಪೂರೈಸುವುದು ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ಗೆಲುವಿನೊಂದಿಗೆ ಮತ್ತೊಂದು ಅವಧಿಯಲ್ಲಿ ಕ್ಷೇತ್ರವಾಸಿಗಳ ಸೇವೆಗೈಯುವ ವಿಶ್ವಾಸವಿದೆ” ಎಂದರು.
ಗ್ಯಾರಂಟಿ ಬೇಡ !?
“ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಪೂರೈಕೆಯಾದಲ್ಲಿ, ರಾಜ್ಯ ದಿವಾಳಿಯಾಗಲಿದೆ. ಯಾಕೆಂದರೆ, ರಾಜ್ಯದ ಬಜೆಟ್ಟಿಗಿಂತ ಎರಡು ಪಟ್ಟು ಹೆಚ್ಚು ಹಣ ಇವರ ಗ್ಯಾರಂಟಿಗಳಿಗೆ ವಿನಿಯೋಗವಾಗಲಿದೆ.
ಆಗ ರಾಜ್ಯ ಆರ್ಥಿಕವಾಗಿ ದಿಲ್ಲಿ, ರಾಜಸ್ಥಾನ ಅಥವಾ ಛತ್ತೀಸ್‌ಗಡ ರಾಜ್ಯಗಳಂತೆ ಪೊಳ್ಳು ಆಶ್ವಾಸನೆಗಳ ರಾಜ್ಯವಾಗಲಿದೆ, ಜನರಿಂದ ನಗೆಪಾಟಲಿಗೀಡಾಗಲಿದೆ. ದೇಶ ಮತ್ತು ರಾಜ್ಯದ ಪ್ರಗತಿ ನಿಟ್ಟಿನಲ್ಲಿ ಭ್ರಷ್ಟಾಚಾರರಹಿತ ಬಿಜೆಪಿಯೇ ಭರವಸೆ” ಎಂದು ಡಾ. ಭರತ್ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದರು.