ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯಪ್ರಮಾಣವಚನ,ಕಾಂಗ್ರೆಸ್ ನಾಯಕರ ಸಂಭ್ರಮಾಚರಣೆ
ಕೈಕಂಬ : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಗಂಜಿಮಠ ಮತ್ತು ಗುರುಪುರ ಕೈಕಂಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಕಾಂಗ್ರೆಸ್ ನಾಯಕರ ಪರ ಘೋಷಣೆ ಕೂಗಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.

ಕಾಂಗ್ರೆಸ್ ನಾಯಕರ ಪಕ್ಷದ ಸಾಧನೆ ಬಗ್ಗೆ ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ ಗುಣಗಾನ ಮಾಡಿ, ಕೇವಲ ಒಂದು ಅವಧಿಯಲ್ಲಿ ರಾಜ್ಯದಲ್ಲಿ ಭಾರೀ ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಹೆಸರಾದ ಬಿಜೆಪಿ ಸರ್ಕಾರದ ವಿರುದ್ಧ ಪಕ್ಷದ ಹಿರಿಯ ಹಾಗೂ ತಳಮಟ್ಟದ ನಾಯಕರು ನಡೆಸಿದ ಜನಜಾಗೃತಿಗೆ ಸಿಕ್ಕ ಪ್ರಚಂಡ ಜಯ ಇದಾಗಿದೆ ಎಂದು ಬಣ್ಣಿಸಿದರು.
ವಿಜಯೋತ್ಸವ ಕಾರ್ಯಕ್ರಮದಲ್ಲಿ ಗಂಜಿಮಠ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲತಿ, ಗಂಜಿಮಠ ಪಂಚಾಯತ್ ಸದಸ್ಯರಾದ ರೋಹಿತಾಶ್ವಿ ಮತ್ತು ಅಬ್ದುಲ್ ಹಮೀದ್, ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶೀ ಪ್ರವೀಣ್ ಫೆರ್ನಾಂಡಿಸ್, ಗಂಗಾಧರ ಪೂಜಾರಿ ಕಾಜಿಲ, ಸಲಾಂ, ಗಂಜಿಮಠ ಪಂಚಾಯತ್ ಮಾಜಿ ಸದಸ್ಯರಾದ ಬೂಬ ಮತ್ತು ಎಂ. ರಜಾಕ್, ದಾಮೋದರ ಟೈಲರ್, ದಾಮೋದರ್ ಕುಲಾಲ್, ಪದ್ಮನಾಭ ಬಲ್ಲಾಳ್ ಗುರುಪುರ ಮತ್ತಿತರರು ಉಪಸ್ಥಿತರಿದ್ದರು.
ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಗ್ ಸ್ಕಿçÃನ್ ಮೂಲಕ ನೂತನ ಸೀಎಂ ಹಾಗೂ ಸಚಿವರ ಪ್ರಮಾಣವಚನ ಸಮಾರಂಭ ವೀಕ್ಷಿಸುವುದರೊಂದಿಗೆ ಸಂಭ್ರಮಿಸಿದರು.