ವಾಮಂಜೂರು ಧರ್ಮಜ್ಯೋತಿ ಸಮಾಜ ಸೇವಾ
ಸಂಸ್ಥೆಯಲ್ಲಿ ಕ್ಯಾನ್ಸರ್ ರೋಗ ತಪಾಸಣಾ ಶಿಬಿರ
ಕೈಕಂಬ : ವಾಮಂಜೂರಿನ ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆ ಮತ್ತು ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಧರ್ಮಜ್ಯೋತಿ ಸಂಸ್ಥೆಯಲ್ಲಿ ಮಾ. ೧೫ರಂದು ಯೇನಪೋಯ ಆಸ್ಪತ್ರೆಯ ಮಹಿಳಾ ಆರೋಗ್ಯ ಸಂಚಾರಿ ಚಿಕಿತ್ಸಾ ಘಟಕದ ಮೂಲಕ ಕ್ಯಾನ್ಸರ್ ರೋಗ ಸ್ಕಿçÃನಿಂಗ್ ತಪಾಸಣಾ ಶಿಬಿರ ಏರ್ಪಡಿಸಲಾಯಿತು.
ಯೆನಪೋಯ ಆಸ್ಪತ್ರೆಯ ಡಾ. ಲೆಮ್ಸಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ರಮ್ಯಶ್ರೀ ಅವರು ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಎಸ್‌ಆರ್‌ಎ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಮಾರ್ಲಿಟ್ ಹಾಗೂ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಜೋಯೆಲ್ ಲಾಸ್ರಾದೊ ಉಪಸ್ಥಿತರಿದ್ದರು. ರೆನಿಟಾ ಸ್ವಾಗತಿಸಿದರೆ, ಶಾಲಿನಿ ಕಾರ್ಯಕ್ರಮ ನಿರ್ವಹಿಸಿದರು. ಕವಿತಾ ಅವರು ವಂದಿಸಿದರು.
ಬೆಳಿಗ್ಗೆ ೧೦:೩೦ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ನಡೆದ ಈ ಶಿಬಿರದಲ್ಲಿ ಸುಮಾರು ೭೫ ಮಹಿಳೆಯರು ವೈದ್ಯಕೀಯ ತಪಾಸಣೆ ನಡೆಸಿದರು.