ಆಸರೆ ಸೇವಾ ಫೌಂಡೇಶನ್ ವತಿಯಿಂದ ಪುಂಚಮೆಯಲ್ಲಿ ಬಸ್ಸು ತಂಗುದಾಣ ನಿರ್ಮಾಣ
ಪೊಳಲಿ:ಕರಿಯಂಗಳ ಗ್ರಾಮದಲ್ಲಿ ಹಲಾವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಆಸರೆ ಸೇವಾ ಸಂಸ್ಥೆಯು ಮಾ.೧೩ರಂದು ಪುಂಚಮೆ ಎಂಬಲ್ಲಿ ಜನರಿಗೆ ಬಸ್ಸುತಂಗುದಾನವನ್ನು ನಿರ್ಮಿಸಿ ಗ್ರಾಮ ಪಂಚಾಯತ್ಗೆ ಹಸ್ತಾಂತರಿಸಿದೆ.
ಇದರ ಉದ್ಘಾಟನೆಯನ್ನು ಪೊಳಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹಾಗೂ ಪುಂಚಮೆ , ಬಾಬಾ ಫಕ್ರುದ್ದಿನ್ ಮಸೀದಿ ಅಶ್ರಫ್ ಮದನಿ- ಉಸ್ತಾದರು ಉದ್ಘಾಟಿಸಿ ಮಾತನಾಡಿದ ಅವರು ಆಸರೆ ಸೇವಾ ಫೌಂಡೇಶನ್ ಇನ್ನಷ್ಟು ಹೆಚ್ಚಿನ ಸೇವಾ ಕಾಯಗಳನ್ನು ಭಗವಂತ ಶಕ್ತಿ ನೀಡಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆಸರೆ ಸೇವಾ ಫೌಂಡೇಶನ್ ಇದರ ಸಂಸ್ಥಾಪಕ ಹಾಗೂ ಗ್ರಾ.ಪಂ ಅಧ್ಯಕ್ಷ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಉಪಾಧ್ಯಕ್ಷೆ ವೀಣಾ ಉಪೇಂದ್ರ ಆಚಾರ್ಯ , ಬೆಳ್ಳೂರು ವಲಯದ ಬಂಟರ ಸಂಘದ ಅಧ್ಯಕ್ಷ ಕೆ. ಜನಾರ್ಧನ ಶೆಟ್ಟಿ ,ರೋಶನ್ ಪುಂಚಮೆ, ಉಮೇಶ್ ಆಚಾರ್ಯ , ಶಿವಪ್ರಸಾದ್ ಸೊಲ್ತಾಡಿ, ಕರಿಯಂಗಳ ಪಂಚಾಯತಿಯ ಭಾರತಿ, ಗ್ರಾ.ಪಂ. ಪಂಚಾಯತ್ ಸದಸ್ಯರಾದ ಲಕ್ಷ್ಮೀಶ ಶೆಟ್ಟಿ, ರಾಧ ಲೋಕೇಶ್ ,ಅಡ್ವಕೇಟ್ ಚಂದ್ರಶೇಖರ್ ರಾವ್ , ಪ್ರಾಶಾಂತ್ ವಿಮಲಕೋಡಿ, ಬಸೀರ್ ಗಾಣೆಮಾರ್, ಪ್ರಸಾದ್ ಗರೋಡಿ, ಪ್ರೇಮನಾಥ ಚೇರ, ಅಲ್ತಾಫ್ ಪುಂಚಮೆ, ಶರತ್ ಪುಂಚಮೆ, ಶೇಖರ ಗಾಣೆಮಾರ್,ಮುಸ್ತಫ ,ಇಸಾಕ್ ಪುಂಚಮೆ, ಅಬ್ಬುಸಾಲಿ ಪುಂಚಮೆ ಮತ್ತಿತರರು ಉಪಸ್ಥಿತರಿದ್ದರು. ಇಬ್ರಾಹೀಂ ನವಾಝ್- ನಿರೂಪಿಸಿ ರಾಜು ಕೋಟ್ಯಾನ್ ವಂದಿಸಿದರು.