ಮಾ. ೧೦ರಂದು ಅಡ್ಡೂರು ಬದ್ರಿಯಾಮಸೀದಿ ನೂತನ ಕಟ್ಟಡ ಉದ್ಘಾಟನೆ
ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಜಂಕ್ಷನ್‌ನಲ್ಲಿರುವ ಬದ್ರಿಯಾ ಮಸೀದಿಯ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ಮಾ. ೧೦ರಂದು ಸಂಜೆ ೩ ಗಂಟೆಗೆ ಬದ್ರಿಯಾ ಜಮಾತ್ ಕಮಿಟಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಬಿ. ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಆಶೀರ್ವಚನ ನೀಡಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಅವರು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ ಸದಖತುಲ್ಲಾ ಫೈಝಿ ಪ್ರಸ್ತಾವಿಸಿದರೆ, ಮಸೀದಿಯ ಉಪಾಧ್ಯಕ್ಷ ಜನಾಬ್ ಝೈನುದ್ದೀನ್ ಸ್ವಾಗತಿಸಲಿದ್ದಾರೆ.
ಸಮಾರಂಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಯು. ಪಿ. ಇಬ್ರಾಹಿಂ, ದ.ಕ ಜಿಲ್ಲಾ ಮದ್ರಸ ಆಡಳಿತದ ಅಧ್ಯಕ್ಷ ಹಾಜಿ ಎಂ. ಎಚ್. ಮೊಹಿಯುದ್ದೀನ್, ಯೂಕೂಬ್ ಫೈಝಿ(ಕಾಂಜಿಲಕೋಡಿ ಮಸೀದಿ) ಮತ್ತಿತರ ಗಣ್ಯಾತಿಗಣ್ಯರು ಉಪಸ್ಥಿತಲಿರುವರು.
ಮಾ. ೧೧ ಮತ್ತು ೧೨ರಂದು ವಿಶೇಷ ಸೌಹಾರ್ದ ಸಭಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಅಡ್ಡೂರು ಅಲ್ ಮದ್ರಸತುಲ್ ಬದ್ರಿಯಾ ಇದರ ಸದರ್ ಮುಅಲ್ಲಿಂ ಆಸಿಫ್ ದಾರಿಮಿ, ಉಸ್ತಾದ್ ಅನ್ವರ್ ಮುಹ್ಯುದ್ದೀನ್ ಹುದವಿ(ಮುಖ್ಯ ಭಾಷಣಕಾರ), ಕ್ಯಾಲಿಕಟ್‌ನ ಖಾಝಿ ಸಯ್ಯಿದ್ ನಾಸಿರ್ ಅಬ್ದುಲ್ ಶಿಹಾಬ್ ತಂಙಳ್ ಪಾಣಕ್ಕಾಡ್, ಎಸ್‌ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಅಬ್ದರ‍್ರಶೀದ್ ಝೈನಿ ಕಾಮಿಲ್ ಸಖಾಫಿ, ಶ್ರೀ ವಿಖ್ಯಾತನಂದ ಸ್ವಾಮಿ(ಸೋಲೂರು ಮಠಾಧೀಶ), ಫಾ. ಸುಜಯ್ ಡೇನಿಯಲ್ ಎಸ್.ಜೆ(ಸಂತ ಅಲೋಶಿಯಸ್ ಕಾಲೇಜು, ಮಂಗಳೂರು), ಪ್ರೊ. ಅನೀಸ್ ಕೌಸರಿ, ಖಲೀಲ್ ಹುದವಿ ಕಾಸರಗೋಡು, ಬಿ. ಎಂ. ಫಾರೂಕ್, ಬಿ. ರಮಾನಾಥ ರೈ, ಮೊÊದಿನ್ ಬಾವ, ಇನಾಯತ್ ಅಲಿ, ರಿಯಾಝ್ ಫರಂಗಿಪೇಟೆ ಹಾಗೂ ಇನ್ನಿತರ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ನಾಯಕರು ಪಾಲ್ಗೊಳ್ಳುವರು ಎಂದು ಸ್ವಾಗತಿ ಸಮಿತಿ ಅಧ್ಯಕ್ಷ ಯು. ಪಿ. ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.