ಗುರುಪುರ ಮನೆಗೆ ಬೆಂಕಿ : ಪೀಠೋಪಕರಣಸಹಿತ ಸುಮಾರು ೫ ಲ. ರೂ. ಸೊತ್ತು ಭಸ್ಮ
ಕೈಕಂಬ : ಗುರುಪುರ ಕಾರಮೊಗರು ಹೊಸಮನೆಯಲ್ಲಿ ಮಾ. ೯ರಂದು ಬೆಳಿಗ್ಗೆ ಆಕಸ್ಮಿಕವಾಗಿ ಕಾಣಿಸಿಕೊಂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.

ಇದು ದೇವನಂದಿನಿ ಮಾರ್ಲ ಎಂಬವರ ಮನೆಯಾಗಿದ್ದು, ಅವರು ಬೆಳಿಗ್ಗೆ ತನ್ನಿಬ್ಬರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿದ್ದ ವೇಳೆ ಮನೆಗೆ ಬೆಂಕಿ ತಗುಲಿದೆ. ಮನೆಯಲ್ಲಿ ಬೆಂಕಿ ಆವರಿಸಿ ದೃಶ್ಯ ಗಮನಿಸಿದ ನೆರೆಮನೆಯವರು ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಮನೆಯ ಹೆಂಚೆಲ್ಲ ಸುಟ್ಟು ಪುಡಿಯಾಗಿ ಎಲ್ಲೆಡೆ ಹಾರಿದ್ದರಿಂದ ತಕ್ಷಣಕ್ಕೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.
ಘಟನಾ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಯು ಸುಮಾರು ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ ದೇವನಂದಿನಿಯವರು ಬಜ್ಪೆ ಪೊಲೀಸ್ ಠಾಣೆ ಹಾಗೂ ಗುರುಪುರ ಪಂಚಾಯತ್‌ಗೆ ದೂರು ನೀಡಿದ್ದಾರೆ.
ಬೆಂಕಿಯಿAದ ಯಾವುದೇ ಸಾವುನೋವು ಸಂಭವಿಸಿಲ್ಲ. ಮನೆಯೊಳಗಿದ್ದ ಬೆಳೆಬಾಳುವ ಪೀಠೋಪಕರಣಗಳ ಸಹಿತ ಸುಮಾರು ೫ ಲಕ್ಷ ರೂ ಮೊತ್ತದ ಸೊತ್ತು ಸುಟ್ಟು ಕರಕಲಾಗಿದೆ. ಮೆಸ್ಕಾಂ ಮತ್ತು ಕಂದಾಯ ಅಧಿಕಾರಿಗಳು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.