ಕುಲವೂರು : ಬಿಜೆಪಿಯ ಹಿರಿಯ ಮುಖಂಡ ಉಮೇಶ್ ಅಮೀನ್ ನಾಗಂದಡಿ ನಿಧನ
ಕೈಕಂಬ: ಮಂಗಳೂರು ತಾಲೂಕಿನ ಕುಲವೂರು ಗ್ರಾಮದ ಬಿಜೆಪಿಯ ಹಿರಿಯ ಮುಖಂಡ, ಸಾಮಾಜಿಕ ಮುಂದಾಳು, ಕುಪ್ಪೆಪದವು ದುರ್ಗೆಶ್ವರೀ ದೇವಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಹಾಲಿ ಟ್ರಷ್ಟಿ ಉಮೇಶ್ ಅಮೀನ್ ನಾಗಂದಡಿ(84) ಅವರು ಬುಧವಾರ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ವೃತ್ತಿಯಲ್ಲಿ ಕೃಷಿಕರಾಗಿದ್ದ, ಬಿಲ್ಲವ ಮುಖಂಡ ಉಮೇಶ್ ಅಮೀನ್ ಅವರು ಇಲ್ಲಿನ ನಾರಾಯಣಗುರು ಯುವ ವೇದಿಕೆಯ ಗೌರವಾಧ್ಯಕ್ಷರಾಗಿ, ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯಾರಾಗಿ ಶಿಕ್ಷಣ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.