ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಕುಟ ಕೊಳದ ಬಳಿ ಅಮೃತ ಸರೋವರ ಕಾಮಗಾರಿಯನ್ನು ಮುಖ್ಯ ಇಂಜಿನೀಯರ್ ಮಾನ್ಯ ಸಿ.ಕೆ ಮಲ್ಲಪ್ಪ ವೀಕ್ಷಣೆ ಮಾಡಿದರು. ಅವರು ನ.28ರಂದು ಸೋಮವಾರ ಕರಿಯಂಗಳ ಗ್ರಾಮದ ಕಲ್ಕುಟ ಕೊಳದ ಬಳಿ ನಿರ್ಮಾಣಗೊಳ್ಳಲಿರುವ ಅಮೃತ ಕಾಮಗಾರಿಯ ಕುರಿತು ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು. ,ಮುಖ್ಯ ಇಂಜಿನೀಯರ್ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಸಿ.ಕೆ.ಮಲ್ಲಪ್ಪ ಅವರು ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸಿ ದೇವರ ದರ್ಶನ ಪಡೆದು ದೇವಸ್ಥಾನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಜಿಪಂ ಉಪಕಾರ್ಯದರ್ಶಿಗಳು, ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ), ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ AEEಗಳು, ಹಾಗೂ ಕರಿಯಂಗಳ ಗ್ರಾಪಂ ಅಧ್ಯಕ್ಷರು, ಸದಸ್ಯರು, ಜಿಪಂ ಎಡಿಪಿಸಿ, ಎಲ್ಲಾ ತಾಲೂಕು ನರೇಗಾ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, IEC ಸಂಯೋಜಕರು ಇತರರು ಉಪಸ್ಥಿತರಿದ್ದರು.




