‘ಚಿಣ್ಣರ ಚಿಗುರು’ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ
ಕೈಕಂಬ: ಮಳಲಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗಾಗಿ ಒಳ್ಳೆಯ ಕಾರ್ಯಕ್ರಮ ಮೂಲಕ ವೇದಿಕೆಯನ್ನು ಕಲ್ಪಿಸಿ, ಕೂಡುವ ಮೂಲಕ ಪ್ರತಿ ವರ್ಷ ಸಾಧಕರಿಗೆ ಸಮ್ಮಾನ ಮಾಡುವ ಮೂಲಕ ಸಮಾಜದಲ್ಲಿ ಅವರನ್ನು ಗುರುತಿಸಿ, ಇತರಿಗೆ ಪ್ರೋತ್ಸಾಹ ನೀಡುವ ಕಲಾವರ್ಧಕ ಯುವಕ ಮಂಡಲವು ಎಲ್ಲರಿಗೂ ಮಾದರಿಯಾಗಿದೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುನಿಲ್ ಗಂಜಿಮಠ ಹೇಳಿದರು.

ಅವರು ಕಲಾವರ್ಧಕ ಮಂಡಲ ನಾರಳ ಸಂಕೇಶ ಹಾಗೂ ಕಲಾಚೇತನ ಯುವತಿ ಮಂಡಲದ ವತಿಯಿಂದ ಸೀತಾರಾಮ ಮಂದಿರದಲ್ಲಿ ನಡೆದ ‘ಚಿಣ್ಣರ ಚಿಗುರು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯುವಕ ಮಾತನಾಡಿದರು.
ಮಳಲಿ ಸರಕಾರಿ ಶಾಲೆಯ ನಿವೃತ್ತ ದೈಹಿಕ ಶಿಕ್ಷಕಿ ಹಾಗೂ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಪೃಥ್ವಿ ಪೂಜಾರಿಯವರನ್ನು ಸಮ್ಮಾನಿಸಲಾಯಿತು. ಪದ್ಮನಾಭ ಪಾಪಮಾರ್ ರಾಮಪ್ಪ ಆಚಾರ್ಯ, ಬಾಬು ಪೂಜಾರಿ, ರಮೇಶ್ ಅಡಪ, ಸೂರ್ಯ ಭಟ್ ಎಂ., ಎಸ್. ಗಂಜಿಮಠ, ಹರಿಯಪ್ಪ ಪೂಜಾರಿ, ಯುವಕ ಮಂಡಲದ ಅಧ್ಯಕ್ಷ ದಿನೇಶ್ ಶೆಟ್ಟಿ, ಯುವತಿ ಮಂಡಲದ ಅಧ್ಯಕ್ಷೆ ಸರಿಕಾ ಉಪಸ್ಥಿತರಿದ್ದರು.
ಶಿವರಾಜ್ ನಾರಾಳ ಸ್ವಾಗತಿಸಿದರು. ವಸಂತ ಶೇಣವ ನಿರೂಪಿಸಿದರು. ಚಂದ್ರಹಾಸ್ ಶೆಟ್ಟಿ ವಂದಿಸಿದರು.