ದೆಹಲಿ ಏರ್ ಪೋರ್ಟ್ ನಲ್ಲಿ NIA ಯಿಂದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಅರೆಸ್ಟ್…!
ನ.18ರಂದು ಶುಕ್ರವಾರದಂದು ಕುಲ್ವಿಂದರ್ ಜಿತ್ ಸಿಂಗ್ ಅಲಿಯಾಸ್ ಖನಪುರಿಯ ಎಂಬಾತನನ್ನು ದೆಹಲಿ ಏರ್ ಪೋರ್ಟ್ ನಲ್ಲಿ ಬಂಧಿಸಿದ್ದು, ಈತ ಖಾಲ್ಸಾ ಇಂಟರ್‌ನ್ಯಾಶನಲ್ ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್‌ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ. ಈ ಆರೋಪಿ ಬಹಳ ಟೆರರಿಸ್ಟ್ ಕೇಸ್ ನಲ್ಲಿ ಭಾಗಿಯಾಗಿದ್ದು, ಪಂಜಾಬ್ ನಲ್ಲಿ ಸುಪಾರಿ ತೆಗೆದುಕೊಂಡು ಉದ್ದೇಶಿತ ಹತ್ಯೆಗಳ ರುವಾರಿಯಾಗಿದ್ದ.

90ರ ದಶಕದಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಮತ್ತು ಇತರ ರಾಜ್ಯಗಳಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲೂ ಭಾಗಿಯಾಗಿದ್ದ. ಈ ಎಲ್ಲಾ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಆಗಿ ಗುರುತಿಸಿಕೊಂಡಿದ್ದು, ಈತನು 2019ರಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಬ್ಯಾಂಕಾಕ್ ನಿಂದ ದೆಹಲಿ ಏರ್ ಪೋರ್ಟ್ ಗೆ ಬರುವ ಖಚಿತ ಮಾಹಿತಿಯ ಮೇರೆಗೆ NIA ತಂಡ ಈತನನ್ನು ಬಂಧಿಸಿದ್ದಾರೆ.