ಬಂಟ್ವಾಳ: ತಾಲೂಕಿನ ದೇವಾಲಯಗಳಲ್ಲಿ ಪ್ರಧಾನವಾದ ದೇವಾಲಯ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಈ ಹಿಂದೆ ‘ನಂದಾವರ’ ಎಂದರೆ ಸಜೀಪ ಮಾಗಣೆಯ ಸಜೀಪಮುನ್ನೂರು, ಸಜೀಪಮೂಡ, ಸಜೀಪನಡು, ಸಜೀಪಪಡು ಈ ನಾಲ್ಕು ಗ್ರಾಮಗಳಲ್ಲಿ ಆರಾಧಿಸಲ್ಪಡುತ್ತಿದ್ದು, ಪ್ರಕೃತ ಇಲ್ಲಿನ ವೈಭೋಪೇತ ಜಾತ್ರ ಸಾನ್ನಿಧ್ಯ ವಿಶೇಷತೆಗಳು, ಕಲ್ಪಿಸಿರುವ ಅನುಕೂಲತೆಗಳು ಮತ್ತು ಸಮಾಜಮುಖಿ ಕೆಲಸ ಕಾರ್ಯಗಳಿಂದಾಗಿ ಹತ್ತೂರನ್ನು ತಲುಪಿದೆ.
ಪುರಾಣದ ನಂಬಿಕೆಯಂತೆ, ಶೃಂಗ ಮುನಿಗಳಿಂದ ಸ್ಥಾಪಿಸಲ್ಪಟ್ಟ ವಿಘ್ನನಿವಾರಕನೆಂದೇ ಪ್ರಸಿದ್ಧನಾದ ಇಲ್ಲಿನ ಬಲಮುರಿ ವಿನಾಯಕನು ಭಕ್ತಾಭಿಮಾನಿಗಳ ನಂಬುಗೆಯ ನಂಟ, ಕರೆದಾಗಲೆಲ್ಲ ಭಕ್ತರ ಮೊರೆಗೆ ಓಗೊಡುವ ದೇವರೆಂದೇ ಈತನ ಖ್ಯಾತಿ, ಸುಮಾರು 8-9ನೇ ಶತಮಾನಗಳಷ್ಟು ಹಿಂದಿನ ಹಳಮೆಯನ್ನು ಈ ದೇವಾಲಯಕ್ಕೆ ಇದೆ ಎನ್ನುವುದು ವಿಮರ್ಶಕರ ಅಭಿಮತ, ದೇವಸ್ಥಾನದ ಮಹಾದ್ವಾರಕ್ಕೆ ಎದುರಾಗಿ, ನಂದಾವರದಲ್ಲಿ ಮೂಲದೇವರೆಂದು ಪೂಜಿಸಲಾಗುತ್ತಿರುವ ಶ್ರೀ ಶಂಕರನಾರಾಯಣ ದೇವರ ಸಾನ್ನಿಧ್ಯವಿದೆ. ಈ ಲಿಂಗದ ಮಧ್ಯಭಾಗದಲ್ಲಿ ವಿಭಾಜಕ ರೇಖೆಯಿದ್ದು ಲಿಂಗದ ಬಲಭಾಗವನ್ನು “ಶ೦ಕರ’ನೆಂದೂ, ಎಡಭಾಗವನ್ನು ‘ನಾರಾಯಣ’ನೆ೦ದೂ ಗುರುತಿಸಿಕೊಳ್ಳಲಾಗಿದೆ. ಶ್ರೀ ವಿನಾಯಕ ಹಾಗೂ ಶಂಕರನಾರಾಯಣ ದೇವಾಲಯದ ಎಡಭಾಗದಲ್ಲಿ ಶ್ರೀ ದುರ್ಗಾಂಬೆಯ ಸಾನ್ನಿಧ್ಯವಿದೆ. ಈ ಸಾನ್ನಿಧ್ಯವು ಕೂಡಾ ಮೂಲದೇವಾಲಯದ ಕಾಲಕ್ಕೇ ಸೇರುವಂತಹದೆಂದು ಅಭಿಪ್ರಾಯ ಪಡಲಾಗಿದೆ. ದೇವಾಲಯದ ಹೊರಭಾಗದಲ್ಲಿ
ಆನ್ನೇಯ ದಿಕ್ಕಿಗೆ ಪ್ರಧಾನ ಪ್ರವೇಶ ದ್ವಾರದ ಎಡಭಾಗದಲ್ಲಿ ನಾಗ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದಲ್ಲಿ, 1984ನೇ ಇಸವಿಯ ಫೆಬ್ರವರಿ ಮೂರರಂದು ವೇದಮೂರ್ತಿಗಳಾದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದು, ತದನಂತರ 2005ರ ಫೆಬ್ರವರಿ 16ರಿಂದ 24ರ ವರೆಗೆ ಬ್ರಹ್ಮಶ್ರೀ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀದೇವರ ಪುನಃ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿತ್ತು, ಈಗ ಸುಮಾರು 17 ವರ್ಷಗಳ ನಂತರ, ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯು ಕಳೆದ ತಾ. 13-09-2021ರಿಂದ 17-09-2021ರ ವರೆಗೆ ಜರುಗಿದ್ದು, ಅದರಲ್ಲಿ ಕಂಡುಬಂದಂತೆ ಕ್ಷೇತ್ರದ ಸಾನ್ನಿಧ್ಯ ಅಭಿವೃದ್ಧಿಗಾಗಿ ಹಲವು ಅಭಿವೃದ್ಧಿಯ ಕೆಲಸಗಳನ್ನು ಜರುಗಿಸಬೇಕೆಂದು ಕಂಡುಬಂದಿತ್ತು. ಆ ಪ್ರಕಾರವಾಗಿ ಇಲ್ಲಿನ ಅಭಿವೃದ್ಧಿಯಲ್ಲಿ ಭಕ್ತ ಸಮೂಹದ ಪಾಲ್ಗೊಳ್ಳುವಿಕೆ ಹಾಗೂ ಆಡಳಿತ ಮಂಡಳಿಯ ಇಚ್ಛಾಶಕ್ತಿಯಿಂದ ಈ ಕಳಗೆ ಉಲ್ಲೇಖಿಸಿದ ಅಭಿವೃದ್ಧಿಯ ಕೆಲಸಗಳು ಜರುಗುತ್ತಾ ಇದೆ. ಸುಮಾರು 2 ಕೋಟಿ ಆಧಿಕ ವೆಚ್ಚದಲ್ಲಿ ಸಂಪನ್ಮೂಲಗಳು ಕ್ರೋಢೀಕರಣಗೊಂಡಿದ್ದು ಊರ ಮತ್ತು ಪರವೂರ ಭಕ್ತಾದಿಗಳ ಸಹಾಯದಿಂದ ಈ ಸತ್ಕಾರ್ಯವು ಸುಗಮವಾಗಿ ನಡೆಯುತ್ತಿದೆ. ಆ ಪ್ರಕಾರವಾಗಿ ದೇವಸ್ಥಾನದ ಗರ್ಭಗುಡಿಗಳು ಮತ್ತು ತೀರ್ಥಮಂಟಪಗಳ ಮರು ಮತ್ತು ತಾಮ್ರದ ಹೊದಿಕೆಯನ್ನು ಹೊದಿಸುವುದು, ದೇವಸ್ಥಾನ ಸುತ್ತುಪೌಳಿಯ ದುರಸ್ತಿ ಮತ್ತು ಅಗತ್ಯ ವ್ಯವಸ್ಥೆಯ ನಿರ್ಮಾಣ, ದೇವಸ್ಥಾನದ ಒಳಾಂಗಣದಲ್ಲಿ ಬಾವಿ ಮತ್ತು ಅರ್ಚಕರ ಅಭ್ಯಂಜನಕ್ಕೆ ವ್ಯವಸ್ಥೆ ಮತ್ತು ದೇವರ ಪೂಜಾ ಶುದ್ದೀಕರಣಕ್ಕೆ ವ್ಯವಸ್ಥೆ, ದೇವಸ್ಥಾನದ ಒಳಾಂಗಣದ ನೆಲದ ಸಂಪೂರ್ಣ ದುರಸ್ತಿ, ಮತ್ತು ದೇವಸ್ಥಾನದಲ್ಲಿ ಹೊಸ ರಥವೊಂದರ ನಿರ್ಮಾಣ
ಕಾರ್ಯ ನಡೆಯುತ್ತಲಿದೆ, ಮುಂದಿನ ವರ್ಷ 2023 ಜನವರಿ 29ರಿಂದ ಫೆಬ್ರವರಿ 3ರವರೆಗೆ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಂಭ್ರಮ ನೆರವೇರಲಿರುವುದು. ಈ ಬಗ್ಗೆ ಮಾಹಿತಿ ನೀಡಲು ಈ ಪತ್ರಿಕಾಗೋಷ್ಠಿಯನ್ನು ನಡೆಸಲಾಗಿದೆ.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದ ಬಗ್ಗೆ ಕಿರು ಮಾಹಿತಿ: ಶ್ರೀ ಶಂಕರ ನಾರಾಯಣ ಸನ್ನಿಧಿ, ನಂದಾವರದಲ್ಲಿ ಮೂಲ ದೇವರೆಂದೇ ಪೂಜಿಸಲಾಗುತ್ತಿರುವ ಉದ್ಭವ ಲಿಂಗವೆಂದೇ ನಂಬಲಾಗಿರುವ ಶಂಕರನಾರಾಯಣ ದೇವರ ಸಾನಿಧ್ಯವಿದೆ, ವಿಶೇಷವೆಂದರೆ ಲಿಂಗದ ಮಧ್ಯಭಾಗದಲ್ಲಿ ವಿಭಾಜಕ ರೇಖೆ ಇದ್ದು ಲಿಂಗದ ಬಲ ಭಾಗವನ್ನು ಶಂಕರನೆಂದು, ಎಡ ಭಾಗವನ್ನು ನಾರಾಯಣನೆಂದು ಗುರುತಿಸಲಾಗುತ್ತದೆ. ಇದು ಹರಿಹರರಲ್ಲಿ ಭೇದವಿಲ್ಲ ಎನ್ನೋದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ಸುಮಾರು 10ನೆ ಶತಮಾನದಿಂದಲೂ ಈ ಲಿಂಗವು ಪೂಜಿಸಲ್ಪಡುತ್ತಿದೆ ಎನ್ನುವುದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೊಂದು ವಿಶೇಷ ಎಂದರೆ ಎಲ್ಲ ಶಿವಾಲಯಗಳಲ್ಲಿ ಇರುವಂತೆ ನಂದಿ
ಮಂಟಪದಲ್ಲಿ ನಂದಿಯಾಗಲಿ, ಗರುಡನ ವಿಗ್ರಹವಾಗಲಿ
ಅಪ್ಪ ಭಕ್ಷ್ಯ ಪ್ರಿಯ-ನಂದಾವರ ಗಣಪತಿ: ವಿಘ್ನ ನಿವಾರಕನೆಂದೇ ಪ್ರಸಿದ್ಧನಾದ, ಕರೆದಾಗಳಲ್ಲೆಲ್ಲ ಭಕ್ತರ ಮೊರೆಗೆ ಓಗೊಡುವ ಪುರಾಣ ನಂಬಿಕೆಯಂತೆ ಶೃಂಗ ಮುನಿಗಳಿಂದ ಸ್ಥಾಪಿಸಲ್ಪಟ್ಟ ನಂದಾವರದ ಬಲಮುರಿ ಗಣಪತಿ, ದಾಖಲೆಗಳ ಪ್ರಕಾರ ಸುಮಾರು 8-9 ಶತಮಾನಗಳ ಹಿಂದೆಯೇ ಈ ವಿಗ್ರಹ ಸ್ಥಾಪನೆಯಾಗಿರಬಹುದೆಂದು ವಿಮರ್ಶಕರ ಅಭಿಮತ, ಸುಂದರ ಕೆತ್ತನೆಯ ಉತ್ಕಟಾಸನದಲ್ಲಿ ಕುಳಿತಿರುವ ಭಂಗಿಯಲ್ಲಿರುವ ಪ್ರಸನ್ನಾರೂಪಿ ವಿಗ್ರಹವಾಗಿದ್ದು, ವಿಶೇಷವೆಂದರೆ ಇಲ್ಲಿಯ ವಿಗ್ರಹದ ಬಳಿ ಗಣಪತಿ ವಾಹನ ಇಲಿಯು ಕಂಡುಬರುವುದಿಲ್ಲ, ನವೀಕರಣ ಕಾರ್ಯ ನಡೆದರೂ ಇಂದಿಗೂ ಮೂಲ ವಿಗ್ರಹವನ್ನ ಪೂಜಿಸಲಾಗುತ್ತಿದೆ.
ನಂದಾವರದ ಆಪ್ಪ: ನಂದಾವರದಲ್ಲಿ ಶಂಕರ ನಾರಾಯಣನೇ ಪ್ರಧಾನ ಆರಾಧ್ಯ ದೈವವಾದರು, ನಂದಾವರ ಅನ್ನುವಾಗ ಜತೆಯಲ್ಲೇ ನೆನಪಿಗೆ ಬರುವುದು ನಂದಾವರ ಗಣಪತಿ, ಈ ಮೊದಲೇ ಹೇಳಿದಂತೆ ನಂದಾವರ ಗಣಪ ಅಪ್ಪ ಭಕ್ಷ ಪ್ರಿಯ, ಇಡೀ ತಾಲೂಕಿನಲ್ಲಿ, ಮಾಗಣೆಯಲ್ಲಿ ಯಾವುದೇ ಸಮಾರಂಭ ಅಥವಾ ವೈಯಕ್ತಿಕ ವಿಚಾರಗಳಿಗೆ, ಗೆಲುವಿಗೆ ಸಂಬಂಧಪಟ್ಟಂತೆ ನಂದಾವರ ಗಣಪತಿಗೆ ಅಪದ ಪೂಜೆ ಸಲ್ಲಿಸಿ ಭಕ್ತರು ನಿವೇದನೆ ಮಾಡಿಕೊಂಡರೆ ಆ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತದೆ ಎನ್ನುವುದು ನಂಬಿಕೆ, ಅಲ್ಲದೆ ಪೂಜೆಯವರು ಗಣತಿಯಲ್ಲಿ ಪ್ರಾರ್ಥನೆ ಮಾಡಿಕೊಂಡು ಆಪ್ತ ಪ್ರಸಾದವನ್ನು ನೀಡುವುದು. ಈ ಸಂದರ್ಭ ಭಕ್ತರಲ್ಲಿ ಉಂಟಾಗುವ ಧನ್ಯತಾಭಾವ, ಕಂಪನ ನಿಜಕ್ಕೂ ವಿಶೇಷ. ಇಲ್ಲಿ ಅಪ್ಪ ತಯಾರಿಕೆಯು ವಿಶೇಷ, ಅಪ್ಪವನ್ನು ಹರಕೆಯ ರೂಪದಲ್ಲಿ ಮಾಡಿಸುವ ಕ್ರಮವಿದ್ದು, ಮದುವೆ, ಉಪನಯನ ಮುಂತಾದ ಶುಭ ಕಾರ್ಯಗಳ ಸಂಧರ್ಭದಲ್ಲೂ ಊಟದ ಎಲೆಗೆ ಪ್ರಸಾದ ರೂಪದಲ್ಲಿ ಬಡಿಸುವ ಕ್ರಮವಿದೆ. ಕೆಲವೊಂದು ವೃತದ ಸಂದರ್ಭ ಕೆಲವರು ಅಪ್ಪವನ್ನೆ ಪ್ರಸಾದ ರೂಪದಲ್ಲಿ ತಿಂದು ವೃತಾಚರಣೆ ಮಾಡುವವರು ಇದ್ದಾರೆ, ಅಪ್ಪ ಅಂದರೆ ಅದು ನಂದಾವರದ ಗಣಪತಿ ದೊಪ್ಪನದ್ದೆ” ಎನ್ನುವ ಮಾತು ಈ ಭಾಗದಲ್ಲಿ ನಿತ್ಯ ಸತ್ಯ ಕೆಲವೊಂದು ಬಾರಿ ಅಪ್ಪವನ್ನು ಪೂರೈಕೆ ಮಾಡಲಾಗದಷ್ಟು ಬೇಡಿಕೆ ಇರುತ್ತದೆ. ಹಾಗಂತ ಬೇಡಿಕೆಗೆ ಅನುಗುಣವಾಗಿ ಒಲೆ ನಿರ್ಮಿಸಿ ಕಾವಲಿ ಇಟ್ಟು ಭಕ್ತರ ಬೇಡಿಕೆಯನ್ನು ಪೂರೈಸುವ ಹಾಗಿಲ್ಲ.
ಶ್ರೀ ದುರ್ಗಾಂಬಾ ಸನ್ನಿಧಿ
ಗಣಪತಿ ಹಾಗೂ ಶಂಕರ ನಾರಾಯಣ ಗರ್ಭ ಗುಡಿಯ ಎಡ ಭಾಗದಲ್ಲಿ ಶ್ರೀ ದುರ್ಗಾಂಬಾ ಸನ್ನಿಧಿ ಇದೆ. ಕೈಯಲ್ಲಿ ಆಯುಧವಿರುವ ಪ್ರಸನ್ನಾರೂಪಿಯಾದ ಚಿತ್ತಾಕರ್ಷಕವಾಗಿರುವ ಶ್ರೀ ದುರ್ಗಾಂಬಾ ದೇವಿಯ ವಿಗ್ರಹ ಮತ್ತು ಶಂಕರ ನಾರಾಯಣ ವಿಗ್ರಹವು ಮೂಲದಲ್ಲಿ ಮುರಕಲ್ಲಿನ ರಚನೆಯಾಗಿತ್ತು. ಈಗ ಇವೆರಡೂ ಶಿಲಾಮಯವಾಗಿ ಕಂಗೊಳಿಸುತ್ತಿದೆ. ಕ್ಷೇತ್ರ ರಕ್ಷಕಿ, ದುರಿತ ನಿವಾರಕಿ, ನಾಲ್ಕೆತ್ತಾಯ ಇಲ್ಲಿನ ಮಾಗಣೆ ದೈವ: ಸಹಸ್ರದ ಒಂದು ಹಾಳೆಗಳ ಆಣಿಯಿಂದ ಕಂಗೊಳಿಸುವ ಸಂಪನ್ನೆ, ದೇವಸ್ಥಾನದಲ್ಲಿ ನಡೆಯುವ ರಥೋತ್ಸವಕ್ಕೆ ಮೊದಲು ದೈವದ
ಭಂಡಾರ ಬಂದು ಉತ್ಸವಕ್ಕೆ ರಕ್ಷಣೆಯ ಆಭಯ ದೊರೆಯಬೇಕು.
ಸಾನಿಧ್ಯ ವಿಶೇಷ: ಸಾನಿಧ್ಯ ವಿಶೇಷದ ಬಗ್ಗೆ ಹೇಳುತ್ತ ಹೋದರೆ ದೊಡ್ಡ ಪಟ್ಟಿಯೇ ಆದೀತು, ಮದುವೆ, ಉದ್ಯೋಗ ಪ್ರಾಪ್ತಿ, ಸಂತಾನ ಪ್ರಾಪ್ತಿ, ವ್ಯಾಪಾರ ವೃದ್ಧಿ, ಗೃಹ ಶಾಂತಿ, ವಿದ್ಯಾಭ್ಯಾಸ, ಕಳವಾದ ವಸ್ತುಗಳ ಸಂದರ್ಭ, ಅಪವಾದ ನಿವಾರಣೆ ಇತ್ಯಾದಿ ಯಾವುದೇ ಸಮಸ್ಯೆ, ಸಂಕಟ, ಎದುರಾಗಿ ಶ್ರೀಕ್ಷೇತ್ರದಲ್ಲಿ ಬಂದು ಪ್ರಾರ್ಥಿಸಿ ಭಿನ್ನವಿಸಿಕೊಂಡರೆ ಅದು ನಿವಾರಣೆಯಾದಂತೆಯೇ ಅನ್ನುವುದು ಭಕ್ತ ಜನರ ಬಲವಾದ ನಂಬಿಕೆ, ಇನ್ನು ನಂದಾವರದ ಸುತ್ತಮುತ್ತ ಅನ್ಯಮತಿಯರೆ ವಾಸಿಸುತ್ತಿದ್ದರು, ಈ ಪ್ರದೇಶ ಯಾವುದೇ ಎಡರು ತೊಡರುಗಳಿಲ್ಲದೆ ಸಾಮರಸ್ಯದ ತಾಣವಾಗಿ ಮಾರ್ಪಟ್ಟಿದೆ. ಶ್ರೀಕ್ಷೇತ್ರವು ಪುರಾತನ ಕಾಲದಿಂದಲೂ ಮಡಿವಂತಿಗೆಯನ್ನು ಮೀರಿ ಪರಸ್ಪರ ಅನ್ನೋನ್ಯತೆಯಿಂದ ಒಡಗೂಡಿ ಯಾವುದೇ ಭೇದಭಾವಗಳಿಲ್ಲದೆ ಬೆರೆತಿರುವುದು ಸುರ್ಹವಾಗಿದೆ.
ದೇವಸ್ಥಾನದ ಬೆಳವಣಿಗೆಯಲ್ಲಿ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿಯ ಜೊತೆ ಭಕ್ತರ ಸಮೂಹ ಪಾಲ್ಗೊಳ್ಳುವಿಕೆ ಕೂಡ ಪ್ರಮುಖ
ಪಾತ್ರ ವಹಿಸುತ್ತದೆ. ಜೊತೆಗೆ ಸಾನಿಧ್ಯ ಅಭಿವೃದ್ಧಿಯ ವಿಚಾರದಲ್ಲಿ ಪೂಜೆ ಮಾಡುವ ವೈದಿಕ ವರ್ಗ, ರುತ್ತಿಜರ ಪಾತ್ರವೂ ಮಹತ್ವಪೂರ್ಣವಾದದ್ದು.
ನಂದಾವರ ಹೆಸರಿನ ಬಗ್ಗೆ:
ನಂದಾವರ ಹೆಸರು ನಂದ ವಂಶದ ರಾಜರ ಹೆಸರಿನಿಂದ ಬಂದಿದೆ ಎಂಬುವುದಕ್ಕೆ ಎರಡು ಇತಿಹಾಸದ ದಾಖಲೆ ಇದೆ. ನಂದ ಅರಸು ಮನೆತನದ ರಾಜಧಾನಿಯಾಗಿದ್ದ ಈ ಊರನ್ನು ನಂದಪುರ ಎಂದು ಕರೆಯುತ್ತಿದ್ದರು. ಕಾಲಕ್ರಮೇಣ ಇಲ್ಲಿರುವ ‘2’ ಕಾರ ‘ವ’ ಕಾರ ವಾಗಿ ನಂದಾವ ಆಗಿ ಮುಂದೆ ನಂದಾವರ ಆಗಿರುವ ಸಾಧ್ಯತೆಗಳಿವೆ ಎಂದು ನಂಬಲಾಗಿದೆ. ಎರಡನೆಯದಾಗಿ ನಂದ ವಂಶದ ಈ ಆರಸರು ತಮ್ಮ ಪಟ್ಟಣದ ಸುತ್ತಲೂ ಆವರಣ ಅಥವಾ ಸುತ್ತು ಕೋಟೆಯನ್ನು ಕಟ್ಟಿಸಿದರಿಂದ ಇದನ್ನು ನಂದಾವರವೆಂದು ಕರೆಯಲಾಯಿತು. ನಂದ ವಂಶದ ಅರಸರು ಇಲ್ಲಿ ಆಡಳಿತ ನಡೆಸುತ್ತಿದ್ದರೆಂದು ಸತ್ಯ ವಿಷಯವಾಗಿತ್ತು. (ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸ್ಥಳ ಪುರಾಣ ನಂದಾವರ ಕ್ಷೇತ್ರ ಪರಿಚಯ ಪುಸ್ತಕದಲ್ಲಿ ಪಡೆಯಬಹುದಾಗಿದೆ)
ಪ್ರಸಕ್ತ ನಂದಾವರ ದೇವಸ್ಥಾನದ ಪ್ರಾಂಗಣದಲ್ಲಿ ನಂದಾದೀಪ ಕಲ್ಯಾಣ ಮಂಟಪ, ಸಮುದಾಯ ಭವನ, ಅನ್ನಪೂರ್ಣ ಭೋಜನ ಶಾಲೆ ಇದ್ದು, ಸಾರ್ವಜನಿಕರಿಗೆ ಶುಭ ಸಮಾರಂಭ ನಡೆಸಲು ಶ್ರೀಮಂತ ವರ್ಗದಿಂದ ಬಡವರ್ಗದ ಜನರಿಗೂ ಅತ್ಯಂತ ಕಡಿಮೆ ದರದಲ್ಲಿ
ಶುಭ ಸಮಾರಂಭ ನಡೆಸಲು ಲಭ್ಯವಿರುತ್ತದೆ. ಜೊತೆಗೆ ಅಪರ ಕ್ರಿಯೆ ನಡೆಸಲು ಸಹ ಇಲ್ಲಿ ಅವಕಾಶವಿದ್ದು ಇದು ಊರ ಮತ್ತು ಪರವೂರ ಜನತೆಗೆ ತುಂಬಾ ಪ್ರಯೋಜನವಾಗುತ್ತಿದೆ.
ಜನ ಸ್ನೇಹಿಯಾದ ವೈದಿಕವರ್ಗ, ಋತ್ವಿಜರು, ಆಡಳಿತ ಮಂಡಳಿ: ದೇವಸ್ಥಾನದ ಅಭಿವೃದ್ಧಿಗೆ ಜನ ಸ್ನೇಹಿಯಾದ ವೈದಿಕವರ್ಗ ಸುತ್ತಿಜರು, ಆಡಳಿತ ಮಂಡಳಿಯ ಸಹಕಾರವು ಅತ್ಯಗತ್ಯವಾಗಿದ್ದು, ಇಲ್ಲಿ ಎಲ್ಲರ ಬೆಂಬಲವೂ ಇರುವುದರಿಂದ ಊರ ಮತ್ತು ಪರವೂರ ಜನತೆಗೆ ತುಂಬಾ ಸಹಕಾರಿಯಾಗುತ್ತಿದೆ. ಇಂದಿಗೂ ಹಲವಾರು ಮಂದಿ ತಮ್ಮ ಶುಭ ಕಾರ್ಯಗಳ ಸಂದರ್ಭಗಳನ್ನು ಇಲ್ಲೇ ನಡೆಸುವಂತೆ ಭಿನ್ನವಿಸಿಕೊಳ್ಳುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳು:
ಜನತಾ ಸೇವೆಯೇ ಜನಾರ್ದನ ಸೇವೆ ಎನ್ನುವ ಮಾತಿಗೆ ಸಾಕ್ಷಿ ಎಂಬಂತೆ ಆಡಳಿತ ಮಂಡಳಿಯ ವತಿಯಿಂದ ದಂತ ಚಿಕಿತ್ಸಾ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ಮಕ್ಕಳ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ಮಾಗಣೆಯ ಕೆಲ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿ ಸಹಕಾರ ನೀಡಿದೆ. ಜೊತೆಗೆ ಸ್ಥಳೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಶೌಚಾಲಯದ ನಿರ್ಮಾಣ, ಪೀಠೋಪಕರಣ, ಅಣ್ಣ ದಾಸೋಹದಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ. ಸ್ವಚ್ಛ ಪರಿಸರದ
ಅಂಗವಾಗಿ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ, ದೇವಾಲಯದ ಹೊರ ಭಾಗದಲ್ಲಿ ಶೌಚಾಲಯ ನಿರ್ಮಾಣ ಕಾರ್ಯವನ್ನು ನಡೆಸಲಾಗಿದೆ. ದೇವಸ್ಥಾನ ಎಂದರೆ ಕೇವಲ ಸಂಸ್ಥೆ ಅಲ್ಲ: ಆದೊಂದು ಬದುಕಿನ ಶ್ರದ್ಧಾ ಕೇಂದ್ರ ಅನ್ನುವುದಕ್ಕೆ ಸಾಕ್ಷಿಯಾಗಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಷ್ಟಾವಧಾನ,
ಪುರಾಣ ಪ್ರವಚನ, ಪಂಚವಾದ್ಯ ಸೇವೆ, ಭರತ ನಾಟ್ಯ, ಯಕ್ಷಗಾನ, ಹರಿಕಥೆ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಕಲಾ
ಪ್ರಕಾರಗಳನ್ನು ಉಳಿಸಿಕೊಳ್ಳುವಲ್ಲಿ ನಂದಾವರ ದೇವಸ್ಥಾನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ: ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಊರವರ, ಪರವೂರ ಭಕ್ತಾದಿಗಳ ಮತ್ತು ಜನ ಪ್ರತಿನಿಧಿಗಳ ಸಹಕಾರ ಬೇಕೆಬೇಕು. ಈ ಹಿಂದೆಯೂ ಹಲವಾರು ಜನಪ್ರತಿನಿಧಿಗಳು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ರೀತಿಯ ಸಹಕಾರ ನೀಡಿದ್ದು, ಮುಂದೆಯೂ ಇದೇರೀತಿಯ ಸಹಕಾರ ನೀಡುವ ಭರವಸೆ ಇದೆ. ಬಿ.ಸಿ.ರೋಡ್, ಬಂಟ್ವಾಳದಿಂದ ಮೂರು ಕಿಲೋಮೀಟರ್ ಅಂತರದಲ್ಲಿ ನೇತ್ರಾವತಿ ನದಿಯ ದಕ್ಷಿಣ ದಂಡೆಯಲ್ಲಿ
ಆಧುನಿಕತೆಯನ್ನು ಇನ್ನು ಮೈಗೂಡಿಸಿ ಕೊಳ್ಳದ, ಅತ್ಯಂತ ರಮಣೀಯ ಪ್ರದೇಶದ ಪ್ರಶಾಂತ ತಾಣದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ.
ಕ್ಷೇತ್ರಕ್ಕೆ ಒಮ್ಮೆ ಕಾಲಿಟ್ಟರೆ ಯಾವುದೋ ಒಂದು ಅವ್ಯಕ್ತ ಭಾವನೆಗೆ ಒಳಗಾದ ಅನುಭವವಾಗುತ್ತದೆ, ಅಂದು ಅರಮನೆ, ಕೋಟೆ ಇದ
ಇಂದು ಅರಮನೆಯೆಲ್ಲ ಕೋಟೆ ಕೊತ್ತಲಗಳಿಲ್ಲ, ಆದರೆ ಈ ಪ್ರದೇಶದಲ್ಲಿ ಓಡಾಡಿದರೆ ಮೊದಲು ಇಲ್ಲೆಲ್ಲ
ಸಾರಿ ಹೇಳುವ ಅವಶೇಷಗಳು ಕುರುಹುಗಳು ಸಿಗುತ್ತವೆ.
