ಗುರುಪುರ-ಕೈಕಂಬದ ರೋಸಾ ಮಿಸ್ತಿಕ ಪ್ರೌಢಶಾಲೆ, ಪಿಯು ಕಾಲೇಜು ಕ್ರೀಡಾಕೂಟಕ್ಕೆ ವರ್ಣರಂಜಿತ ಮೆರಗು
ಕೈಕಂಬ : ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಪಿಯು ಕಾಲೇಜು ಮತ್ತು ರೋಸಾ ಮಿಸ್ತಿಕಾ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟವು ಶಾಲಾ ಮೈದಾನದಲ್ಲಿ ಶನಿವಾರ ನಡೆಯಿತು.
ವಿದ್ಯಾರ್ಥಿಗಳ ವರ್ಣರಂಜಿತ ನೃತ್ಯ, ಆಕಾಶದೆತ್ತರಕ್ಕೆ ತ್ರಿವರ್ಣ ಬಲೂನ್ ಹಾರಾಟ ಮತ್ತು ಕ್ರೀಡಾ ಜ್ಯೋತಿ ಬೆಳಗುವುದೊಂದಿಗೆ ಕ್ರೀಡಾಕೂಟ ಉದ್ಘಾಟನೆಗೊಂಡಿತು.
ಅಧ್ಯಕ್ಷತೆ ಹಾಗೂ ಕ್ರೀಡಾಕೂಟದ ಧ್ವಜಾರೋಹಣ ಮಾಡಿದ ಪ್ರಾಂತ್ಯಾಧಿಕಾರಿಣಿ ಹಾಗೂ ಬೆಥನಿ ವಿದ್ಯಾ ಸಂಸ್ಥೆ ಮಂಗಳೂರು ಪ್ರಾಂತ್ಯದ ಕಾರ್ಪೊರೆಟ್ ಮ್ಯಾನೇಜರ್ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸ ಮಾತನಾಡಿ, ಶಾಲಾ-ಕಾಲೇಜು ಮಟ್ಟದ ಈ ಕ್ರೀಡಾಕೂಟದ ಮೂಲಕ ನಿಮ್ಮ ಪ್ರತಿಭೆ ಬೆಳಗಲಿ. ಗೆದ್ದರೂ, ಸೋತರೂ ನಿಮ್ಮ ಪ್ರಯತ್ನಕ್ಕೆ ಕಡಿವಾಣ ಹಾಕದೆ, ಸಾಧನೆಯ ಹಾದಿಯಲ್ಲಿ ಮುನ್ನಡೆಯಿರಿ. ರಾಜ್ಯ, ರಾಷ್ಟç ಮತ್ತು ವಿಶ್ವ ಮಟ್ಟದ ಕ್ರೀಡಾಕೂಟದಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಧನೆ ಬೆಳಗಲಿ ಎಂದರು.
ಗುರುಪುರ `ಸ್ನೇಹಸದನ’ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ಫಾ. ಸಿಬಿ ಮಾತನಾಡಿ, ಜಾತ-ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರ ಒಗ್ಗೂಡುವಿಕೆಗೆ ಕ್ರೀಡೆ ಸಾಕ್ಷಿಯಾಗಿದೆ. ಎಲ್ಲರಲ್ಲೂ ಕ್ರೀಡಾಸ್ಫೂರ್ತಿ ಜಾಗೃತವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಶಾಲಾ ದೈಹಿಕ ಶಿಕ್ಷಕ ಲ್ಯಾನ್ಸಿ ಸಿಕ್ವೇರ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ರೋಸಾ ಮಿಸ್ತಿಕ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಲೊಲಿಟಾ ಪ್ರೇಮ ಪಿರೇರ ಸ್ವಾಗತಿಸಿ, ಪ್ರಸ್ತಾವಿಕ ಮಾತನ್ನಾಡಿದರು. ಗುರುಪುರ ಕೈಕಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಮೆಲ್ವಿನ್ ಸಲ್ಡಾನ, ರೋಸಾ ಮಿಸ್ತಿಕ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜೆಫ್ರಿಯನ್ ತಾವ್ರೋ(ಎಂಜೆಎಫ್), ರೋಸಾ ಮಿಸ್ತಿಕ ಸಮೂಹ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಗ್ರೇಸಿ ಮೋನಿಕಾ, ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ, ರೋಸಾ ಮಿಸ್ತಿಕ ಪಿಯು ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ಸಾಧನಾ, ಪಿಯು ಕಾಲೇಜು ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ವಿನಯ್ ಕಾರಂತ, ಪ್ರೌಢಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಉಷಾ, ಶಿಕ್ಷಕ-ಉಪನ್ಯಾಸಕ ವೃಂದ, ಶಿಕ್ಷಕೇತರ ವರ್ಗ ಉಪಸ್ಥಿತರಿದ್ದರು. ಶಿಕ್ಷಕಿ ಐಡಾ ಮೇರಿ ಪಿರೇರ ಮತ್ತು ಉಪನ್ಯಾಸಕಿ ಸುಜಾತಾ ನಿರೂಪಿಸಿದರು. ಉಪನ್ಯಾಸಕ ಆವಿಲ್ ರೆನಿಲ್ ಡಿ’ಸಿಲ್ವ ವಂದಿಸಿದರು.