ಕಂದಾವರ ಪೋಂಪೈ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ
ಕೈಕಂಬ: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಕಂಕನಾಡಿ, ಫಾದರ್ ಮುಲ್ಲರ್ ಸಾಲ್ವದೋರ್ ಮೊಂತೆರೋ,ಗ್ರಾಮೀಣ ಆರೋಗ್ಯ ಕೇಂದ್ರ, ಬಜ್ಪೆ ಇದರ ವತಿಯಿಂದ ಕಂದಾವರ ಪೋಂಪೈ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಂದಾವರ ಪಂಚಾಯತ್ ನ ಸದಸ್ಯರಾದ ಸುದರ್ಶನ್ ಮಾತನಾಡುತ್ತಾ, ಸರಿಯಾದ ಮಾಹಿತಿಯನ್ನು ಪಡೆದು, ಅದರಂತೆ ನಡೆದುಕೊಳ್ಳುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂದರು.

ಡಾ !ರಿಯೋನ್ ಜೋಸೆಫ್ ಸಲ್ದಾನರವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಖಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಆರೋಗ್ಯ ಸಾಮಾಜಿಕ ಕಾರ್ಯಕರ್ತರಾದ ಗೌತಮ್ ರಾವ್ ಬಿ. ಮತ್ತು ಕು.ಲಿನೆಟ್ ಶರಲ್ ಕೊರೆಯಾ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಉಷಾ ಮೋಹನ್ ಜೋಗಿ , ಶ್ರೀಮತಿ ಸಂಧ್ಯಾ ಪಿ ರವರು ಉಪಸ್ಥಿತರಿದ್ದರು.
ಅಂಗನವಾಡಿ ಶಿಕ್ಷಕಿ ಶ್ರೀಮತಿ ಉಷಾ ಸ್ವಾಗತಿಸಿ ಧನ್ಯವಾದಗಳನ್ನರ್ಪಿಸಿದರು. ಭರತ್ ಎಸ್.ಕರ್ಕೇರ ನಿರೂಪಿಸಿದರು.