ಎಸ್.ಎಸ್ ಮಿನರಲ್ಸ್ ಎಂಡ್ ಬಿವೆರೆಂಜಸ್ ಫ್ಯಾಕ್ಟರಿಗೆ ಅರಗ ಜ್ಞಾನೇಂದ್ರ ಭೇಟಿ;
ಕೈಕಂಬ: ಸುಶಾಂತ್ ಹಾಗೂ ಶಿಫಾಲಿ ಅವರ ಮಾಲಿಕತ್ವದ ಎಸ್.ಎಸ್ ಮಿನರಲ್ಸ್ ಎಂಡ್ ಬಿವೆರೆಂಜಸ್ “ಹನಿ ಮಿಸ್ಟ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್” ಫ್ಯಾಕ್ಟರಿಗೆ ಶಿಫಾಲಿಯವರ ತಂದೆ ಎಚ್.ಕೆ ಲೋಕೇಶ್ ತೀರ್ಥಹಳ್ಳಿ ಅವರಿಗೆ ಆತ್ಮೀಯರಾದ ಕರ್ನಾಟಕ ಸರಕಾರದ ಗ್ರಹಸಚಿವ ಅರಗ ಜ್ಞಾನೇಂದ್ರ ಅವರು ನ.೧೨ರಂದು ಶನಿವಾರ ಖಾಸಗಿ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಉದ್ಯಮಿಗಳಾದ ಕೆ.ಗೋಪಾಲಕೃಷ್ಣ, ಕೆ.ಲೋಕೇಶ್, ಎಚ್.ಕೆ ಲೋಕೇಶ್, ಕೆ.ರಾಜೀವ, ಕೆ.ಹರೀಶ್, ಕೆ.ವರ್ನಾಕ್ಷ, ಪ್ರೇಮಲತಾ, ರೇಖಾ, ಸುಶಾಂತ್, ಶಿಫಾಲಿ ಹಾಗೂ ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.



