ಗುರುಪುರದಲ್ಲಿ ಇಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ರವಿ ಶೆಟ್ಟಿಗೆ ಸಾರ್ವಜನಿಕ ಹುಟ್ಟೂರ ಗೌರವ-ಸನ್ಮಾನ
ಕೈಕಂಬ : ಗುರುಪುರ ಬಂಟರ ಮಾತೃ ಸಂಘ(ರಿ) ಇವರ ನೇತೃತ್ವದಲ್ಲಿ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ ಗುರುಪುರ ಇದರ ಸಹಕಾರದೊಂದಿಗೆ ಇಂದು(ನ. ೧೩) ಸಂಜೆ ೪:೩೦ಕ್ಕೆ ಗುರುಪುರ ಕುಕ್ಕುದಕಟ್ಟೆಯಲ್ಲಿರುವ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡುಂಬೈಲು ಡಾ. ರವಿ ಶೆಟ್ಟಿ ದೋಣಿಂಜೆಗುತ್ತು ಇವರಿಗೆ ‘ಸಾರ್ವಜನಿಕ ಹುಟ್ಟೂರ ಗೌರವ ಸಮರ್ಪಣೆ’ ಕಾರ್ಯಕ್ರಮ ನಡೆಯಲಿದೆ.
ಸಂಜೆ ೪:೩೦ಕ್ಕೆ ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ಭಂಡಾರ ಮನೆಯಲ್ಲಿ ಪ್ರಾರ್ಥನೆ ನೆರವೇರಿಸಿ, ದೈವಸ್ಥಾನದಿಂದ ಸಮುದಾಯ ಭವನದವರೆಗೆ ಸನ್ಮಾನಿತರನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು.
ಸಂಜೆ ೫ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯವರು ಆಶೀರ್ವಚನ ನೀಡಲಿದ್ದಾರೆ. ಜಾಗತಿಕ ಬಂಟರ ಯಾನೆ ನಾಡವರ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ದೀಪ ಪ್ರಜ್ವಲನೆ ಮಾಡಿದರೆ, ಶ್ರೀ ಮುಂಡಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಗಡಿಕಾರ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಐಕಳ ಹರೀಶ್ ಶೆಟ್ಟಿ, ನಳಿನ್ ಕುಮಾರ್ ಕಟೀಲ್, ಡಾ. ಭರತ್ ಶೆಟ್ಟಿ, ರಮಾನಾಥ ರೈ, ಮಂಜುನಾಥ ಭಂಡಾರಿ ಶೆಡ್ಡೆ, ಡಾ. ಶಶಿಕಲಾ ಗುರುಪುರ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಮಹಾಬಲ ಅಮೀನ್, ಚಂದ್ರಹಾಸ ಪೂಜಾರಿ ಭಂಡಾರಮನೆ, ತನಿಯಪ್ಪ ಪೂಜಾರಿ ಗುರುಪುರ, ಸಿ. ಎ. ಶಾಂತಾರಾಮ ಶೆಟ್ಟಿ, ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಪಾಲ್ಗೊಳ್ಳುವರು. ಆಗ್ನೇಸ್ ಕಾಲೇಜಿನ ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಅಭಿನಂದನಾ ಭಾಷಣ ಮಾಡಿದರೆ, ಕು. ನಿಶಾ ಶೆಟ್ಟಿ ತಿರುವೈಲು ಕಾರ್ಯಕ್ರಮ ನಿರೂಪಿಸಲಿದ್ದಾರೆ.