ಅಜೆಕಾರಿನಲ್ಲಿ ಕನ್ನಡ ರಾಜ್ಯೋತ್ಸವ ಕವಿ ಸಮಯ
ಅಜೆಕಾರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಜ್ಯೋತಿ ಪ್ರೌಢ ಶಾಲೆ ಮತ್ತು ಜ್ಯೋತಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ- ಕವಿ ಸಮಯ ನಡೆಯಿತು. ಕನ್ನಡದ ಹಿರಿಯ ಕವಿಗಳ ಸಾಹಿತ್ಯವನ್ನು ಅಧ್ಯಯನ ನಡೆಸಬೇಕೆಂದುರಾಜ್ಯೋತ್ಸವ ಪುರಸ್ಕ್ರತ ಸುಬ್ರಮಣ್ಯ ಧಾರೇಶ್ವರ ಅವರು ನೇರ ಧ್ವನಿ ಸಂದೇಶದ ಮೂಲಕ ಹೇಳಿದ ರಲ್ಲದೆ ದೇವದಾಸ ಈಶ್ವರಮಂಗಲ ಅವರ ಗೀತೆಯನ್ನು ಹಾಡಿ ಗಮನ ಸೆಳೆದರು.
ಬಾಲಕೃಷ್ಣ ಹೆಗ್ಡೆ ಅಜೆಕಾರು ಅಧ್ಯಕ್ಷತೆ ವಹಿದ್ದರು. ಕವಿಸಮಯವನ್ನು ಹಿರಿಯ ಕವಿ ಕಾಂತಾವರ ಶಿವಾನಂದ ಶೆಣೈ, ಕಾರ್ಕಳ ಉದ್ಘಾಟಿಸಿದರು.
ಪ್ರೇಮಾ ಬಸನಗೌಡ ಬಿರಾದಾರ-ವಿಜಯಪುರ ರೇಖಾ ಸುದೇಶ ರಾವ್ ಮಂಗಳೂರು, ರೋನಿ ಮೊಂಡೊನ್ನಾ ಅಜೆಕಾರು,ದೇವದಾಸ ಈಶ್ವರಮಂಗಲ ಕವಿತೆ ವಾಚಿಸಿ ಶುಭಹಾರೈಸಿದರು.
ನವೋದಿತ ಕವಿಗಳಾದ ಯಶ ಸ್ ತಂತ್ರಿ , ಸುದೀಕ್ಷಾ ನಾಯಕ್ ನೆಲ್ಲಿಕಟ್ಟೆ, ವೀಕ್ಷಾ, ರಮ್ಯಾ, ರಚನಾ,
ಇಂಚರಾ.ಯು.ರಾವ್, ಪಲ್ಲವಿ ಕಾಮತ್, ದಿವ್ಯ ಕುಮಾರಿ, ಸಿಂಚನಾ, ವಿಘ್ನೇಶ, ಸುಮಂತ್ ಪೂಜಾರಿ, ದೇವಿಶರಣ್, ರಾಮ, ನವ್ಯ ನಾಯಕ್, ಧನುಶ್ರೀ, ಅಕ್ಷತಾ, ಸೃಷ್ಠಿರಾವ್, ಸ್ವಸ್ತಿ ಡಿ.ಶೆಟ್ಟಿ, ಪ್ರಸ್ತುತಿ ಆಚಾರ್ಯ, ಶ್ರೀರಕ್ಷಾ,
ಪ್ರಾಪ್ತಿ, ಶ್ರೀನಿಧಿ ಹೆಗ್ಡೆ, ವೀಕ್ಷಾ ಕವನವಾಚನ ಮಾಡಿದರು. ಕಾಲೇಜಿನ ಪ್ರಾಂಶುಪಾಲೆ ಸಗಯ ಸೆಲ್ವಿ, ಸುಂದರ ಪೂಜಾರಿ, ಬಾಲಕೃಷ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ರಾಜ್ಯಾಧ್ಯಕ್ಷ, ಶಾಲೆಯ ಹಳೆ ವಿದ್ಯಾರ್ಥಿ ಡಾ.ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿಸಿದರು.
ಶಿಕ್ಷಕಿ ರೇಶ್ಮಾ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತೆ ಸುನೀತಾ ಅಂಡಾರು ನಿರೂಪಿಸಿದರು. ಉಪನ್ಯಾಸಕ ಸುಂದರ ಪೂಜಾರಿ ವಂದಿಸಿದರು.