ಸುರತ್ಕಲ್ ಕಟ್ಲದಲ್ಲಿ ೧೪.೪೪ ಕೋ. ರೂ ವೆಚ್ಚದಲ್ಲಿ ೧೯೨ ನಿರ್ಮಾಣಕ್ಕೆ ಶಂಕುಸ್ಥಾಪನೆ ಸರ್ಕಾರದಿಂದಲೇ ಸುಸಜ್ಜಿತ ವಸತಿ ಸಮುಚ್ಛಯ : ಡಾ. ಭರತ್ ಶೆಟ್ಟಿ
ಕೈಕಂಬ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಇಡ್ಯಾ ಪೂರ್ವ ವಾರ್ಡ್ ೬ರ ಕಟ್ಲ ನವನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೧೪.೪೪ ಕೋಟಿ ರೂ ವೆಚ್ಚದಲ್ಲಿ ೧೯೨ ಕುಟುಂಬಗಳಿಗೆ ನಿರ್ಮಾಣವಾಗುತ್ತಿರುವ ನೂತನ ವಸತಿ ಸಮುಚ್ಛಯ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಆಯೋಜಿಸಲಾದ ಸಭೆಯಲ್ಲಿ ಶಾಸಕರು ಮಾತನಾಡಿ, ಬಡ ಕುಟುಂಬಗಳಿಗೆ ಸ್ವಂತ ಮನೆ ಎಂಬುದು ಒಂದು ಕನಸಿನಂತಾಗಿದೆ. ಈಗ ಹಿಂದಿನಂತೆ ಎಲ್ಲ ಕಡೆ ಸೈಟ್ ನೀಡಲು ಕಷ್ಟವಾಗುತ್ತಿದೆ. ಸರ್ಕಾರಿ ಭೂಮಿ ಕೊರತೆಯಿಂದಾಗಿ ಈ ಬಾರಿ ಸರ್ಕಾರವೇ ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಿಸಿ ಮನೆ ಕಟ್ಟಿ ಕೊಡಲು ತೀರ್ಮಾನಿಸಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರು ವಸತಿ ಸಮುಚ್ಛಯದ ವಿನ್ಯಾಸ ಬಿಡುಗಡೆಗೊಳಿಸಿ, ಹಿಂದೂ ಸಂಪ್ರದಾಯದಂತೆ ಭೂಮಿ ಪೂಜೆ ನಡೆಸಿದರು. ಕಾರ್ಯಕ್ರಮದಲ್ಲಿ ಮನಪಾ ಮೇಯರ್ ಜಯಾನಂದ ಅಂಚನ್, ಕಾರ್ಪೊರೇಟರ್‌ಗಳಾದ ನಯನಾ ಕೋಟ್ಯಾನ್, ಶಕೀಲಾ ಕಾವ, ಕಿಶೋರ್ ಕೊಟ್ಟಾರಿ, ಸರಿತಾ ಎಸ್, ಲಕ್ಷ್ಮಿ ಎಸ್ ದೇವಾಡಿಗ, ಶೋಭಾ ಆರ್, ವೇದಾವತಿ, ವರುಣ್ ಚೌಟ, ಶ್ವೇತಾ ಪೂಜಾರಿ, ಪ್ರಶಾಂತ ಮುಡಾಯಿಕೋಡಿ, ರಂಜಿನಿ ಕೋಟ್ಯಾನ್, ಮನೋಜ್ ಕುಮಾರ್, ಮನಪಾ ಅಧಿಕಾರಿಗಳು, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು, ಗುತ್ತಿಗೆದಾರರು, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹೇಶ್ ಮೂರ್ತಿ, ಮಂಡಲ ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ, ಯುವ ಮೋರ್ಚಾ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ, ಬಾಬುಚಂದ್ರ, ಸುಲತಾ, ಬಿಜೆಪಿ ಹಿರಿಯ ಕಾರ್ಯಕರ್ತ ಚಂದ್ರಹಾಸ ಶೆಟ್ಟಿ, ಸ್ಥಳೀಯರಾದ ಶೇಖರ್, ಆನಂದ ದೇವಾಡಿಗ, ಬಿಜೆಪಿ ಪದಾಧಿಕಾರಿಗಳು, ಸ್ಥಳೀಯ ನಾಗರಿಕರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.