ಪೊಳಲಿ ರಾಮಕೃಷ್ಣ ತಪೋವನದಲ್ಲಿ 25ನೇ ರಾಷ್ಟ್ರೀಯ ಮತದಾರರ ದಿನಾಚರಣೆ
ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿ ಆಶ್ರಯದಲ್ಲಿ ರಾಮಕೃಷ್ಣ ತಪೋವನದಲ್ಲಿ 25ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್ ಎಂ ಪಿ ವಹಿಸಿದ್ದರು.

ಸಮಗ್ರ ಶಿಕ್ಷಣ ಕರ್ನಾಟಕದ ಸಹ ನಿರ್ದೇಶಕರಾದ ಗಾಯತ್ರಿ ದೇವಿ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಬಹಳ ಮುಖ್ಯ ಎಂದು ತಿಳಿಸಿದರು. ಮುಖ್ಯ ಜಗದೀಶ್ ಪಿ ಎಸ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕರಾದ ಮತ್ತು ಸ್ವೀಪ್ ಇದರ ನೋಡಲ್ ಆದ ಶ್ರೀಮತಿ ಸುಜಾತ ಕುಮಾರಿ ಶ್ರೀಮತಿ ಸುಧಾ, ಶ್ರೀಮತಿ ಪ್ರತಿಮಾ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರದ ರಾಧಾಕೃಷ್ಣ ಭಟ್ ಸರ್ವರನ್ನು ಸ್ವಾಗತಿಸಿದರೆ ಜಾನೆಟ್ ಲೋಬೊ ಧನ್ಯವಾದ ಗೈದರು. ಶ್ರೀಮತಿ ಸುಜಾತ ಕುಮಾರಿ ಪ್ರಸ್ತಾವನೆಯನ್ನು ಮಾಡಿದರೆ ಶ್ರೀಮತಿ ರಂಜಿತ ರಾಜೀವ ಟಿ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಸಂಪೂರ್ಣ ಸಹಕಾರ ನೀಡಿದರು.
