ಗೋವನ್ನು ಕೇವಲ ವ್ಯಾವಹಾರಿಕ ದೃಷ್ಠಿಯಿಂದ ಸಾಕಬೇಡಿ:ಪ್ರಸಾದ್ ಅತ್ತಾವರ
ಕುಪ್ಪೆಪದವು ಕಾಪಿಕಾಡು ರಾಮಸೇನೆ ಘಟಕದಿಂದ ಸಾಮೂಹಿಕ ಗೊಪೂಜೆ.
ಕೈಕಂಬ: ಗೋವನ್ನು ಕೇವಲ ವ್ಯಾವಹಾರಿಕ ದೃಷ್ಠಿಯಿಂದ ಮಾತ್ರ ಸಾಕಬಾರದು,ಎಲ್ಲಾ ದೇವರುಗಳ ನೆಲೆ ಗೋಮಾತೆ ಗೋವನ್ನು ಪೂಜಿಸಿದರೆ ಎಲ್ಲಾ ದೇವರನ್ನು ಪೂಜಿಸಿದಂತೆ. ಇಂದು ಗೋವನ್ನು ಆದಾಯದ ದೃಷ್ಠಿಯಿಂದ ನೋಡಲಾಗುತ್ತಿದೆ ಆದಾಯ ಬರದಿದ್ದರೆ ಅದನ್ನು ಕಸಾಯಿ ಖಾನೆಗೋ ಅಥವಾ ಗೋಶಾಲೆಗೆ ಕೊಡಲಾಗುತ್ತದೆ ಹಿಂದೂಗಳ ಈ ದೃಷ್ಟಿಕೋನ ಬದಲಾಗಬೇಕು ಕೇವಲ ಆದಾಯಕ್ಕಾಗಿ ಗೋವುಗಳನ್ನು ಸಾಕದೆ ಗೋಮಾತೆ ಎಂಬ ಪೂಜ್ಯ ಭಾವದಿಂದ ನೋಡಬೇಕು ಎಂದು ರಾಮ್ ಸೇನಾ ಕರ್ನಾಟಕ(ರಿ) ಸ್ಥಾಪಕ ಪ್ರಸಾದ್ ಅತ್ತಾವರ ಹೇಳಿದ್ದಾರೆ.

ಅವರು ಬುಧವಾರ ಮಂಗಳೂರು ತಾಲೂಕಿನ ಕುಪ್ಪೆಪದವು ಕಾಪಿಕಾಡು ರಾಮಸೇನೆಯ ವಾಯುಪುತ್ರ ಘಟಕದ ವತಿಯಿಂದ ಇಲ್ಲಿನ ಅಯ್ಯಪ್ಪ ಮಂದಿರದಲ್ಲಿ ನಡೆದ 3 ನೇ ವರ್ಷದ ಸಾಮೂಹಿಕ ಗೊಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸ್ಥಳೀಯ ಮುಖಂಡ ವಿಶ್ವನಾಥ ಪಾಕಜೆ ಮಾತನಾಡಿ ಹಿಂದೆ ಗೊಪೂಜೆ ಮನೆಗಳಿಗೆ ಸೀಮಿತವಾಗಿತ್ತು ಇಂದು ಸಂಘಟನೆಗಳು ಹಿಂದೂಗಳನ್ನು ಒಂದುಗೂಡಿಸಿ ಸಾಮೂಹಿಕವಾಗಿ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ.ಹಿಂದುಗಳಿಗೆ ಅನ್ಯಾಯವಾದಾಗ ಹಿಂದೂ ಸಂಘಟನೆಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ಹೋರಾಟ ನಡೆಸಬೇಕು ಎಂದರು.
ಪ್ರಗತಿಪರ ಕೃಷಿಕ ರಾಜೇಶ್ ಶೆಟ್ಟಿ ಉಳಿಪಾಡಿ ಮತ್ತು ಮಂಗಳೂರು ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಗಣೇಶ್ ಪಾಕಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ವೇಳೆ ಝೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಫೈನಲ್ ಹಂತಕ್ಕೇರಿದ್ದ ಬಾಲಪ್ರತಿಭೆ ಕುಪ್ಪೆಪದವು ಕಟ್ಟೆಮಾರಿನ ಕುಮಾರಿ ಶ್ರಾವ್ಯ ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ವೇದಿಕೆಯಲ್ಲಿ ಗೌರವಿಸಲಾಯಿತು.
ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯರುಗಳಾದ ನಿತೇಶ್ ದೊಡ್ಡಳಿಕೆ, ಮಂಜುಳಾ, ರಾಮಸೇನಾ ಮಂಗಳೂರು ತಾಲೂಕು ಕಾರ್ಯದರ್ಶಿ ಪ್ರವೀಣ್, ಹಿಂದೂ ಮುಖಂಡ ಹರೀಶ್ ಆಚಾರ್ಯ ಕೆಂಪುಗುಡ್ಡೆ, ರಾಮಸೇನಾ ಕಾಪಿಕಾಡು ಘಟಕದ ಅಧ್ಯಕ್ಷ ಚಂದ್ರಹಾಸ್, ಗೌರವಾಧ್ಯಕ್ಷ ಸಂತೋಷ ಕಾಪಿಕಾಡು, ಕಾರ್ಯದರ್ಶಿ ಗುರುಪ್ರಸಾದ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಗೌರವಾಧ್ಯಕ್ಷ ಸಂತೋಷ ಕಾಪಿಕಾಡು, ಅಧ್ಯಕ್ಷ ಚಂದು ಕೋಟ್ಯಾನ್ ಕುಪ್ಪೆಪದವು, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಸಂಘಟನಾ ಕಾರ್ಯದರ್ಶಿ ವಿಜಯ್ ಕಾಪಿಕಾಡು, ಗೊರಕ್ಷಾ ಪ್ರಮುಖ್ ಮನೋಜ್ ಕುಪ್ಪೆಪದವು, ವಿದ್ಯಾರ್ಥಿ ಪ್ರಮುಖ್ ಬಾಲಕೃಷ್ಣ ಕಲ್ಲಾಡಿ ಇವರುಗಳಿಗೆ ಪ್ರಸಾದ್ ಅತ್ತಾವರ ಹಣೆಗೆ ತಿಲಕವಿಟ್ಟು, ಕೇಸರಿ ಶಾಲು ಹಾಕಿ ಅಭಿನಂದಿಸಿದರು.
ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇರುವೈಲು ಇವರಿಂದ ಭಜನಾ ಕಾರ್ಯಕ್ರಮ ಜರಗಿತು.ಚಿತ್ರಾ ಎಡಪದವು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.