ಕಿನ್ನಿಕಂಬಳ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಉಮೇಶ ಆಚಾರ್ಯ ಆಯ್ಕೆ
ಕೈಕಂಬ: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಇದರ ವಾರ್ಷಿಕ ಮಹಾಸಭೆಯು ನಾಗೇಶ ಆಚಾರ್ಯ ಕಂದಾವರಪದವು ಅವರ ಅಧ್ಯಕ್ಷತೆಯಲ್ಲಿ ನ.೦೨ರಂದು ಬುಧವಾರ ಜರಗಿತು. ಸಭೆಯಲ್ಲಿ ೨೦೨೧-೨೨ನೇ ಸಾಲಿನ ಪದಾದಿಕಾರಿಗಳ ಸಮೀತಿಯನ್ನು ವಿಸರ್ಜಿಸಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಕಿನ್ನಿಕಂಬಳ ಇದರ ನೂತನ ಅಧ್ಯಕ್ಷರಾಗಿ ಉಮೇಶ ಆಚಾರ್ಯ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಯೋಗೀಶ ಆಚಾರ್ಯ ಕಿನ್ನಿಕಂಬಳ, ಕಾರ್ಯದರ್ಶಿ ಭವಾನಿಶಂಕರ ಆಚಾರ್ಯ ಕಿನ್ನಿಕಂಬಳ, ಜತೆಕಾರ್ಯದರ್ಶಿ ಪ್ರಕಾಶ್ ಪಿ ಆಚಾರ್ಯ, ವಿಘ್ನೇಶ್ ಆಚಾರ್ಯ, ಕೋಶಾದಿಕಾರಿಯಾಗಿ ಪ್ರದೀಪ್ ಅಡ್ಡೂರು, ಕ್ರೀಡೆ/ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರವಿ ಎನ್ ಆಚಾರ್ಯ, ಹರೀಶ್ಚಂದ್ರ ಆಚಾರ್ಯ ಮೊಗರು, ಗುರುಪ್ರಸಾದ್, ಸದಾಶಿವ ಆಚಾರ್ಯ, ಹರೀಶ್ ಆಚಾರ್ಯ ಸಾದೂರು, ಪುರುಷೋತ್ತಮ ಆಚಾರ್ಯ ಬೈಲು, ಗಣೇಶ ಆಚಾರ್ಯ ಬೈಲು, ಸಂಘಟನಾ ಕಾರ್ಯದರ್ಶಿಗಳಾಗಿ ದಿನೇಶ್ ಆಚಾರ್ಯ ಕೈಕಂಬ, ಪ್ರಾಣೇಶ್ ಆಚಾರ್ಯ ಕೈಕಂಬ, ಸಂಘದ ಗೌರವ ಸಲಹೆಗಾರರಾಗಿ ಜಿ.ಗಣೇಶ್ ಆಚಾರ್ಯ ಹಾಗೂ ೨೦ಜನರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಜನಾರ್ಧನ ಆಚಾರ್ಯ ಪೊಳಲಿ ಧನ್ಯವಾದವಿತ್ತರು.