ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಗುರುಪುರ ಕೈಕಂಬದ ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮ
ಕೈಕಂಬ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಗುರುಪುರ ಕೈಕಂಬದ ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮವು ನ.೧ರಂದು ಮಂಗಳವಾರ ಅಡ್ಡೂರಿನ ಹೋಟೆಲ್ ರೆಜನ್ಸಿ ಯುಪಿ ಗಾರ್ಡನ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಕಟ ಪೂರ್ವ ರಾಷ್ಟ್ರ ಅಧ್ಯಕ್ಷರಾದ ಡಾ. ಅರವಿಂದ ರಾವ್ ಕೇದಿಗೆ ಅವರು ಕೈಕಂಬದ ಸ್ಥಾಪಕ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ.ಅವರಿಗೆ ಪ್ರಮಾಣವಚನ ಭೋದಿಸಿದರು.
ರಾಷ್ಟ್ರ ಅಧಿಕಾರಿ ಚಿತ್ರ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಶೇಷವಾದ ಸನ್ಮಾನವನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನಲ್ಲಿ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿ ವಿಜೇತರಾದ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಗುತ್ತು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ಪ್ರಮುಖರಿಗೆ ಗೌರವಾಭಿನಂದನೆ ಮಾಡಲಾಯಿತು.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಗುರುಪುರ ಕೈಕಂಬದ ಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಎಂ, ಸ್ಥಾಪಕ ಕಾರ್ಯದರ್ಶಿ ಡಾ. ಸಿದ್ದಿಕ್ ಅವರು ಎಲ್ಲಾ ಸದಸ್ಯರನ್ನು ಪರಿಚಯಿಸಿದರು, ಸ್ಥಾಪಕ ಕೋಶಾಧಿಕಾರಿ ಪ್ರವೀಣ್ ರೋಡ್ರಿಗಸ್, ಉಪಾಧ್ಯಕ್ಷರಾದ ಡಾ ಪುಷ್ಪಲತಾ ಭಂಡಾರಿ, ವಾಮನ್ ಪೂಜಾರಿ ,ಎ.ಕೆ ರಿಯಾಜ್ ಅಡ್ಡೂರು, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಘಟಕದ ಅಧ್ಯಕ್ಷರಾದ ಕಿಶೋರ್ ಪೆರ್ನಾಂಡಿಸ್ ,ಕಾರ್ಯದರ್ಶಿ ಪ್ಲೇವಿ ಡಿಮೆಲ್ಲೋ, ಕೋಶಾಧಿಕಾರಿ ಶಾಲಿನಿ ಪ್ರಶಾಂತ ಸುವರ್ಣ ಹಾಗೂ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಗುರುಪುರ ಕೈಕಂಬದ ಸದಸ್ಯರಾಗಿ ಗುರುಪುರ ಗ್ರಾಮ ಪಂಚಾಯಿತಿನ ಅಧ್ಯಕ್ಷ ಯಶವಂತ ಶೆಟ್ಟಿ ಬೆಳ್ಳೂರು ಗುತ್ತು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಯುಪಿ ಇಬ್ರಾಹಿಂ ಅವರು ಸದಸ್ಯತ್ವ ಪಡೆದರು. ಉಪಸ್ಥಿತರಿದ್ದರು.