ದೆಹಲಿಯಲ್ಲಿ ದಂಪತಿ, ಮನೆಗೆಲಸದಾಕೆಯ ಬರ್ಬರ ಹತ್ಯೆ – ಮಗು ಮಾತ್ರ ಸೇಫ್
ನವದೆಹಲಿ: ದಂಪತಿ ಮತ್ತು ಅವರ ಮನೆಗೆಲಸದಾಕೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಅಶೋಕ್ ವಿಹಾರ್‌ನಲ್ಲಿರುವ ಮನೆಯಲ್ಲಿ ಸಮೀರ್ ಅಹುಜಾ, ಅವರ ಪತ್ನಿ ಶಾಲು ಮತ್ತು ಮನೆಗೆಲಸದಾಕೆ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ದಂಪತಿಯ ಎರಡು ವರ್ಷದ ಮಗಳು ಸುರಕ್ಷಿವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗೆಲಸದಾಕೆ ಸಪ್ನಾ ಇಂದು ಬೆಳಗ್ಗೆ 7.30ರ ಸುಮಾರಿಗೆ ಕೆಲಸಕ್ಕೆ ಬಂದ ಬಳಿಕ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೂ ಮುನ್ನ ಇಂದು ಬೆಳಗ್ಗೆ ಐವರು ಮೋಟಾರ್ ಬೈಕ್‍ನಲ್ಲಿ ಮನೆಗೆ ಬಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.