ಅರುಣ್ ಪೂಜಾರಿ ಆತ್ಮಹತ್ಯೆ
ಕೈಕಂಬ : ಮೂಡು ಶೆಡ್ಡೆಯ ನಿಸರ್ಗಧಾಮಕ್ಕೆ ಹತ್ತಿರದ ನಿವಾಸಿ ಅರುಣ್ ಪೂಜಾರಿ(35) ಕಳೆದ ಸಂಜೆ ಗುರುಪುರ ಫಲ್ಗುಣೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ.
ವೃತ್ತಿಯಲ್ಲಿ ಪೇಂಟರ್ ಆಗಿದ್ದ ಇವರ ಪತ್ನಿ ವರ್ಷದ ಹಿಂದೆ ವಿಚ್ಛೇದನ ನೀಡಿದ್ದು, ಪುತ್ರಿಯೊಂದಿಗೆ ತಾಯಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿರುವ ಸಾಧ್ಯತೆ ಇದೆ. ಮಂಗಳೂರು ಗ್ರಾಮಾಂತರ (ಕಂಕನಾಡಿ )ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಎಸ್ ಡಿ ಆರ್ ಎಫ್, ಮುಳುಗುಗಾರರು ಕಳೆದ ರಾತ್ರಿಯಿಂದಲೇ ಶವ ಶೋಧ ಕಾರ್ಯ ಆರಂಭಿಸಿದ್ದು ಶುಕ್ರವಾರ ಮಧ್ಯಾಹ್ನ ಸೇತುವೆಯ ಪಿಲ್ಲರ್ ಕೆಳಗಡೆ ಶವ ಪತ್ತೆಯಾಗಿದೆ.