ಬಜಪೆ:ಪೇಜಾವರ ಶ್ರೀಗಳಿಂದ ನೆಲ್ಲಿತೀರ್ಥ ಗುಹಾಪ್ರವೇಶ
ಕ್ಯೆಕಂಬ :ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯಕ್ಕೆ ಉಡುಪಿಯ ಪೇಜಾವರ ಆಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಮಂಗಳವಾರದಂದು ಭೇಟಿ ನೀಡಿ ನೆಲ್ಲಿ ತೀರ್ಥ ಶ್ರೀಸೋಮನಾಥೇಶ್ವರ ಗುಹಾಲಯದ ಗುಹಾ ಪ್ರವೇಶಗೈದು ಗುಹಾ ತೀರ್ಥಸ್ನಾನವನ್ನು ಮಾಡಿ ಮಾಧ್ಯಮದೊಂದಿಗೆ ಮಾತನಾಡಿದರು.

ಈ ಸಂದರ್ಭ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಧರ್ಮದರ್ಶಿ ಹರಿಕೃಷ್ಣ ಪುನರೂರು,ಧಾರ್ಮಿಕ ಪರಿಷದ್ ಸದಸ್ಯ ಭುವನಾಭಿರಾಮ ಉಡುಪ,ಎನ್.ವಿ ವೆಂಕಟರಾಜ್ ಭಟ್,ಪ್ರಸನ್ನ ಭಟ್,ಎನ್ ವಿ ಜಿಕೆ ಭಟ್,ಎನ್ ವಿ ರಮೇಶ್ ಭಟ್,ಅರ್ಚಕ ಗಣಪತಿ ಭಟ್,ಗ್ರಾಮಸ್ಥರು ಹಾಗೂ ಮೊದಲಾದವರು ಹಾಜರಿದ್ದರು.
